ಗದಗ: ಪತಂಜಲಿ ಮಹಿಳಾ ಯೋಗ ಸಮಿತಿಯಿಂದ ನಗರದ ಮುನ್ಸಿಪಲ್ ಕಾಲೇಜು ಆವರಣದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.
ಪತಂಜಲಿ ಯೋಗ ತಂಡದ ಸಹೋದರರಿಗೆ ಸಹೋದರಿಯರು ರಾಕಿ ಕಟ್ಟಿದರು. ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಪತಂಜಲಿ ಯೋಗ ತಂಡದ ಸದಸ್ಯರು ಭಾಗಿಯಾಗಿದ್ದರು.
ಪತಂಜಲಿ ಯೋಗ ರಾಜ್ಯ ಪ್ರಭಾರಿ ಭಗವರಾಲ್ ಆರ್ಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸ್ವದೇಶಿ ಬಳಸಿ, ದೇಶ ಉಳಿಸಿ ಘೋಷಣೆ ಕೂಗಲಾಯಿತು.
ಯೋಗ ತಂಡದ ಸದಸ್ಯರಿಗೆ ಯೋಗ-ವ್ಯಾಯಾಮ, ಪ್ರಾಣಾಯಾಮ, ಧ್ಯಾನ-ಭಜನೆ ಅಗ್ನಿಹೋತ್ರ ಕಲಿಕೆಯ ಪುಸ್ತಕ ವಿತರಿಸಲಾಯಿತು.
ಕಾರ್ಯಕ್ರಮದ ನಂತರ ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು.