Friday, April 18, 2025
Google search engine

Homeಸಿನಿಮಾರಕ್ಷಿತ್​ ಶೆಟ್ಟಿ ಬಳಗದಿಂದ ಹೊಸ ಸಿನಿಮಾ‘Bachelor Party’ ಪೋಸ್ಟರ್​ ಬಿಡುಗಡೆ

ರಕ್ಷಿತ್​ ಶೆಟ್ಟಿ ಬಳಗದಿಂದ ಹೊಸ ಸಿನಿಮಾ‘Bachelor Party’ ಪೋಸ್ಟರ್​ ಬಿಡುಗಡೆ

2016ರ ಡಿಸೆಂಬರ್​ನಲ್ಲಿ ತೆರೆಕಂಡ ‘ಕಿರಿಕ್​ ಪಾರ್ಟಿ’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಗಿತ್ತು. ಆ ಸಿನಿಮಾವನ್ನು ನಿರ್ಮಿಸುವ ಮೂಲಕ ರಕ್ಷಿತ್ ಶೆಟ್ಟಿ ಅವರು ಭರ್ಜರಿ ಯಶಸ್ಸು ಕಂಡಿದ್ದರು. ಅಂಥದ್ದೇ ಮತ್ತೊಂದು ಸಿನಿಮಾ ಬರಲಿ ಎಂಬುದು ಪ್ರೇಕ್ಷಕರ ಬಯಕೆ ಆಗಿತ್ತು. ಈಗ ಅಂಥವರಿಗೆಲ್ಲ ಖುಷಿ ನೀಡುವಂತಹ ಸುದ್ದಿ ಹೊರಬಿದ್ದಿದೆ. ರಕ್ಷಿತ್​ ಶೆಟ್ಟಿ ಅವರ ಬಳಗದಿಂದ ಹೊಸ ಸಿನಿಮಾ ಅನೌನ್ಸ್​ ಮಾಡಲಾಗಿದೆ. ‘ಬ್ಯಾಚುಲರ್ ಪಾರ್ಟಿ’ (Bachelor Party) ಎಂದು ಈ ಸಿನಿಮಾಗೆ ಹೆಸರು ಇಡಲಾಗಿದೆ. ಈ ಸಿನಿಮಾದಲ್ಲಿ ದಿಗಂತ್​, ಅಚ್ಯುತ್​ ಕುಮಾರ್​, ಲೂಸ್​ ಮಾದ ಯೋಗಿ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

‘ಬ್ಯಾಚುಲರ್ ಪಾರ್ಟಿ’ ಹೇಗಿರಲಿದೆ ಎಂಬುದರ ಝಲಕ್ ತೋರಿಸಲು ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಅಭಿಜಿತ್ ಮಹೇಶ್ ನಿರ್ದೇಶನ ಮಾಡುತ್ತಿದ್ದು, ರಕ್ಷಿತ್ ಶೆಟ್ಟಿ ಮತ್ತು ಅಮಿತ್ ಗುಪ್ತ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ‘ ಕಿರಿಕ್ ಪಾರ್ಟಿ’ ಸಿನಿಮಾದ ಬರಹಗಾರ ಅಭಿಜಿತ್ ಮಹೇಶ್ ಅವರು ಈಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಈಗ ನಿರ್ದೇಶಕರಾಗಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

RELATED ARTICLES
- Advertisment -
Google search engine

Most Popular