Thursday, April 3, 2025
Google search engine

Homeರಾಜ್ಯನಾಡಿನೆಲ್ಲೆಡೆ ರಂಜಾನ್ ಸಂಭ್ರಮ: ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ; ನಗರದ ಹಲವೆಡೆ ಸಂಚಾರ ನಿರ್ಬಂಧ

ನಾಡಿನೆಲ್ಲೆಡೆ ರಂಜಾನ್ ಸಂಭ್ರಮ: ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ; ನಗರದ ಹಲವೆಡೆ ಸಂಚಾರ ನಿರ್ಬಂಧ

ಬೆಂಗಳೂರು: ನಾಡಿನೆಲ್ಲೆಡೆ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತಿದ್ದು, ಹಬ್ಬದ ಸಾಮೂಹಿಕ ಪ್ರಾರ್ಥನೆ ಹಿನ್ನೆಲೆಯಲ್ಲಿ ನಗರದ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಸಂಚಾರ ದಟ್ಟಣೆ ತಪ್ಪಿಸಲು ಹಾಗೂ ರಂಜಾನ್ ಹಬ್ಬದ ಆಚರಣೆಗೆ ಅಡಚಣೆ ಆಗದಂತೆ ಟ್ರಾಫಿಕ್ ಪೊಲೀಸರು ಬದಲಿ ಮಾರ್ಗ ಬಳಸುವಂತೆ ಸೂಚಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚನೆ ನೀಡಿದ್ದಾರೆ.

ರಂಜಾನ್ ಸಾಮೂಹಿಕ ಪ್ರಾರ್ಥನೆ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಮತ್ತು ಮೈಸೂರು ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.

31.03.2025 ರಂದು ರಂಜಾನ್ ಹಬ್ಬದ ಪ್ರಯುಕ್ತ ಚಾಮರಾಜಪೇಟೆ ಸಂಚಾರ ಪೊಲೀಸ್ ಸರಹದ್ದಿನ ಬಿಬಿ ಜಂಕ್ಷನ್ ಹತ್ತಿರದ ಮಸೀದಿ ಹಾಗೂ ಬಿಬಿಎಂಪಿ ಆಟದ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಭಾಗವಹಿಸುತ್ತಿರುವುದರಿಂದ ಈ ಕೆಳಕಂಡ ರಸ್ತೆಯ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಬಳಸಲು ಕೋರಿದೆ ಎಂದು ಚಾಮರಾಜಪೇಟೆ ಸಂಚಾರ ಪೊಲೀಸರು ಟ್ವೀಟ್ ಮಾಡಿ, ವಿವರ ತಿಳಿಸಿದ್ದಾರೆ.

  • ಮೈಸೂರು ರಸ್ತೆಯ ಪೋಲ್‌ಗೇಟ್ ಜಂಕ್ಷನ್​ನಿಂದ ಬಿಬಿ ಜಂಕ್ಷನ್ ಮೂಲಕ ಬಿಜಿಎಸ್ ಫ್ಲೈಓವರ್ ಮೇಲ್ಬಾಗದಿಂದ ಟೌನ್‌ ಹಾಲ್‌ ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಮೈಸೂರು ಕಡೆಯಿಂದ ಟೌನ್ ಹಾಲ್ ಕಡೆಗೆ ಹೋಗುವ ವಾಹನಗಳು ಬ್ಯಾಟರಾಯನಪುರ ಸಂಚಾರ ರಾಣಾ ಸರಹದ್ದಿನ ಕಿತ್ತೋ ಜಂಕ್ಷನ್‌ನಲ್ಲಿ ಎಡತಿರುವು ಪಡೆದುಕೊಂಡು ವಿಜಯನಗರ ಮೂಲಕ ಸಾಗಬಹುದು.
  • ಟೌನ್‌ಹಾಲ್ ಕಡೆಯಿಂದ ಮೈಸೂರು ಕಡೆಗೆ ಬಿಜಿಎಸ್ ಫ್ಲೈಓವರ್ ಮೇಲ್ಬಾಗದಿಂದ ಬಿಬಿ ಜಂಕ್ಷನ್ ಮಾರ್ಗವಾಗಿ ಟೋಲ್‌ಗೇಟ್ ಜಂಕ್ಷನ್ ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಟೌನ್‌ಹಾಲ್ ಕಡೆಯಿಂದ ಮೈಸೂರು ಕಡೆಗೆ ಹೋಗುವ ವಾಹನಗಳು ಬಿಜಿಎಸ್ ಫ್ಲೈಓವರ್ ಕೆಳಗಡೆ ಸರ್ವಿಸ್ ರಸ್ತೆಯನ್ನು ಬಳಸಿಕೊಂಡು ಭಾರಿ ವಾಹನಗಳು ವೆಟರ್ನರಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಗೂಡ್‌ಶೆಡ್ ರಸ್ತೆ ಮೂಲಕ ಮತ್ತು ಲಘುವಾಹನಗಳು ಸಿರ್ಸಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದುಕೊಂಡು ಜೆ.ಜೆ ನಗರ-ಟ್ಯಾಂಕ್‌ ಬಂಡ್ ರಸ್ತೆ ಬಿನ್ನಿಮಿಲ್ ಜಂಕ್ಷನ್- ಹುಣಸೇಮರ ಮೂಲಕ ಸಾಗುವುದು.
  • ಬಸವನಗುಡಿ ಹಾಗೂ ಚಾಮರಾಜಪೇಟೆ ಕಡೆಯಿಂದ ಮೆಜೆಸ್ಟಿಕ್ ಕಡೆಗೆ ಹೋಗುವಂತಹ ವಾಹನಗಳು ಚಾಮರಾಜಪೇಟೆ 1 ನೇ ಮುಖ್ಯರಸ್ತೆ, 5ನೇ ಅಡ್ಡ ರಸ್ತೆ ಮೂಲಕ ಮೈಸೂರು ರಸ್ತೆ, ಸಿರ್ಸಿ ಸರ್ಕಲ್, ಬಿನ್ನಿಮಿಲ್ ರಸ್ತೆಯ ಮೂಲಕ ಸಾಗುವುದು.

RELATED ARTICLES
- Advertisment -
Google search engine

Most Popular