ರಾಮನಗರ: ಶಾಲಾ ವಾಹನಕ್ಕೆ ಸಿಲುಕಿ ಮಗು ಸಾವನ್ನಪ್ಪಿರುವ ಘಟನೆ ತಾವರೆಕೆರೆಯ ಎಂಇಎಸ್ ಶಾಲೆಯಲ್ಲಿ ನಡೆದಿದೆ.
ಕೃಷ್ಣೇಗೌಡ ರಾಧಾ ದಂಪತಿಯ ಪುತ್ರಿ ಲಿಸ್ಮಿತಾ(7) ಸಾವಿಗೀಡಾದ ಮಗು.
ತಾವರೆಕೆರೆಯ ಶ್ರೀನಿಧಿ ಬಡವಣೆಯಲ್ಲಿ ಕುಟುಂಬ ವಾಸಿಸುತ್ತಿತ್ತು. ನಿನ್ನೆ ಸಂಜೆ ಶಾಲೆ ಮುಗಿಸಿ ಮನೆ ಬಳಿ ವಾಹನದಿಂದ ಇಳಿದು ಮುಂದೆ ಹೋಗುತ್ತಿದ್ದ ವಿದ್ಯಾರ್ಥಿಯನ್ನು ಗಮನಿಸದೆ ಚಾಲಕ ವಾಹನ ಚಾಲನೆ ಮಾಡಿದ್ದಾನೆ. ಪರಿಣಾಮ ವಾಹನ ಹರಿದು ತೀವ್ರವಾಗಿ ಗಾಯಗೊಂಡಿದ್ದ ಲಿಸ್ಮಿತಾಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದೆ.
ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಎಂಇಎಸ್ ಶಾಲೆಯ ಆಡಳಿತ ಮಂಡಳಿ ಹಾಗೂ ಡ್ರೈವರ್ ವಿರುದ್ಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.