ರಾಮನಗರ :ಡೆಂಗಿ, ಚಿಕುನ್ ಗುನ್ಯ, ಮುಂಜಾಗೃತೆ ಮತ್ತು ನಿಯಂತ್ರಣ ಕ್ರಮಗಳ ಯಶಸ್ವಿ ಅನುಷ್ಠಾನದಲ್ಲಿ ಸಮುದಾಯದ ಸಹಭಾಗಿತ್ವ ಅವಶ್ಯಕವಾಗಿದ್ದು ಆರೋಗ್ಯ ಸೇವೆಗಳಿಂದ ದೂರವಿರುವ ಗುಡ್ಡ-ಗಾಡು ಪ್ರದೇಶ, ಗಡಿ ಪ್ರದೇಶ, ಬುಡಕಟ್ಟು ಪ್ರದೇಶ, ಹಿಂದುಳಿದ ಹಳ್ಳಿಗಳಿಗೆ ಹೆಚ್ಚಿನ ಆದ್ಯತೆ ನೀಡಲು ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳನೊಳಗೊಂಡoತೆ ಡೆಂಗಿ ನಿಯಂತ್ರಣ ಹಾಗೂ ಮುಂಜಾಗೃತ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸ್ಥಬ್ದ ಚಿತ್ರವಿರುವ ಡೆಂಗಿ ರಥ ಎಂಬ ವಾಹನ ಮೂಲಕ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರು ಜಾಗೃತರಾಗಿ ಡೆಂಗಿ ಜ್ವರ ನಿಯಂತ್ರಿಸಲು ಸಹಕರಿಸುವಂತೆ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಮಂಜುನಾಥ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಡೆಂಗಿ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಶಶಿಧರ್ ಮಾತನಾಡಿ, ಡೆಂಗಿ ವಿರೋಧ ಮಾಸಾಚರಣೆ ಅಂಗವಾಗಿ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗಿ, ಚಿಕುನ್‌ಗುನ್ಯ, ಮೆದುಳು ಜ್ವರ, ಆನೆಕಾಲು ರೋಗಗಳು ಹಾಗೂ ನಿಯಂತ್ರಣ ಕುರಿತಂತೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಡೆಂಗಿ ರಥ ಚಾಲನೆ ಇಂದಿನಿoದ ಪ್ರಾರಂಭಿಸಿದ್ದು ನಮ್ಮ ಕಛೇರಿ ವತಿಯಿಂದ ರೆಕಾರ್ಡ್ ಮಾಡಿರುವ ಡೆಂಗಿ ನಿಯಂತ್ರಣ ಕುರಿತು ಜಿಂಗಲ್ಸ್ ಅನ್ನು ಡೆಂಗಿ ರಥದ ಮೂಲಕ ರಾಮನಗರ ಜಿಲ್ಲಾ ವ್ಯಾಪ್ತಿಯ ಪ್ರಾ.ಆ.ಕೇಂದ್ರ, ಉಪಕೇಂದ್ರ, ಗ್ರಾಮ, ಶಾಲಾ ಕಾಲೇಜುಗಳು, ಪ್ರದೇಶಗಳಲ್ಲಿ ಹೆಚ್ಚಿನ ಪ್ರಚಾರ ಮಾಡಿ ಜೊತೆಗೆ ಕರ ಪತ್ರಗಳನ್ನು ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು. ಇದರಿಂದ ಸಾರ್ವಜನಿಕರು ಶಾಲಾ ಮಕ್ಕಳು, ಹಾಗೂ ಇತರರು ಮಾಹಿತಿಯನ್ನು ತಿಳಿದುಕೊಂಡು ಸಮುದಾಯದಲ್ಲಿ ಡೆಂಗಿ ನಿಯಂತ್ರಿಸಲು ಸಹಕರಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಿ.ಎಲ್.ಒ ಡಾ. ಮಂಜುನಾಥ್, ಡಿ.ಎಂ.ಒ ಡಾ. ಶಶಿಧರ್, ಆರ್.ಸಿ.ಹೆಚ್.ಒ ಡಾ. ರಾಜು, ಡಿ.ಟಿ.ಒ ಡಾ. ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್, ಡಿ.ಎಂ.ಒ ಕಚೇರಿಯ ಆರೋಗ್ಯ ಮೇಲ್ವಿಚಾರಣಾಧಿಕಾರಿ ರೇಣುಕಯ್ಯ, ಕೀಟ ಶಾಸ್ತçಜ್ಞೆ ಸೌಮ್ಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿನಯ್ ಕುಮಾರ್, ರಾಜೇಂದ್ರ, ವಿಠಲ್, ಆರೋಗ್ಯ ಸಿಬ್ಬಂದಿ ಹಾಗೂ ಇತರರು ಹಾಜರಿದ್ದರು.