ರಾಮನಗರ: ಆನೆ ಪಳಗಿಸುತ್ತೇನೆ ಎಂದು ಕಾಡಿಗೆ ಹೋದವನು ಕಾಡಾನೆಗೆ ಬಲಿಯಾದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹೊರವಲಯದ ಬನ್ನಿಮುಕೋಡ್ಲು ಬಳಿ ನಡೆದಿದೆ.
ಚಂದ್ರಣ್ಣ(55) ಮೃತ ವ್ಯಕ್ತಿ.
ಕಳೆದ ಎರಡು ದಿನದ ಹಿಂದೆ ಅರಣ್ಯ ಪ್ರದೇಶಕ್ಕೆ ನುಗ್ಗಿದ್ದ ಕಾಡಾನೆಗಳನ್ನು ಪಳಗಿಸುತ್ತೇನೆ ಎಂದು ಬನ್ನೇರುಘಟ್ಟ ಅರಣ್ಯಕ್ಕೆ ಹೋಗಿದ್ದ.
ಆದರೆ, ಎರಡು ದಿನಗಳಾದರೂ ಚಂದ್ರಣ್ಣ ಮನೆಗೆ ವಾಪಾಸ್ ಆಗಿರಲಿಲ್ಲ. ಈ ಹಿನ್ನಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಡುಕಾಡಿದಾಗ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಬನ್ನೇರುಘಟ್ಟ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.