ಬಳ್ಳಾರಿ:ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ದರೂರು ಗ್ರಾಮದ ರಾಮಾಂಜಿನಿ.ಕೆ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿ.ಹೆಚ್.ಡಿ ಪದವಿ ಘೋಷಿಸಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಭಾಷಾ ನಿಕಾಯದಲ್ಲಿ ಡಾ.ಸಿ.ಕೊಟ್ರಪ್ಪ ಅವರ ಮಾರ್ಗದರ್ಶನದಲ್ಲಿ “ಹೈದ್ರಾಬಾದ್ ಕರ್ನಾಟಕದ ಜನಪದ ಕಥಾ ಸಾಹಿತ್ಯದ ಆಶಯ ಮತ್ತು ಅಭಿವ್ಯಕ್ತಿ” ಎಂಬ ವಿಷಯ ಪ್ರಬಂಧ ಮಂಡನೆಗೆ ವಿವಿಯು ಪಿ.ಹೆಚ್.ಡಿ ಪದವಿ ಘೋಷಿಸಿದೆ.ದುರುಗಪ್ಪ.ಕೆ ಮತ್ತು ಶಂಕ್ರಮ್ಮ ಅವರ ಮಗನಾದ ರಾಮಾಂಜಿನಿ.ಕೆ ಅವರು, ಜ.10 ರಂದು ನಡೆಯುವ ಕನ್ನಡ ವಿವಿಯ ಘಟಿಕೋತ್ಸವದಲ್ಲಿ ಪದವಿ ಸ್ವೀಕಾರ ಮಾಡುವರು ಎಂದು ವಿವಿ ಪ್ರಕಟಣೆ ತಿಳಿಸಿದೆ.