Monday, April 21, 2025
Google search engine

Homeಸ್ಥಳೀಯರಾಮಾಯಣ ಪ್ರವಹಿಸುವ ಗಂಗೆಯಂತೆ: ಕೃ.ರಾಮಚಂದ್ರ

ರಾಮಾಯಣ ಪ್ರವಹಿಸುವ ಗಂಗೆಯಂತೆ: ಕೃ.ರಾಮಚಂದ್ರ


ಮೈಸೂರು: ರಾಮಾಯಣ ಮಹಾಗ್ರಂಥ ಪ್ರವಹಿಸುವ ಗಂಗೆಯಂತೆ ಅದನ್ನು ಒಮ್ಮೆಗೆ ಓದಿ ಎತ್ತಿಡುವಂತಹ ಕೃತಿಯಲ್ಲ ಎಂದು ವಿದ್ವಾನ್ ಕೃ.ರಾಮಚಂದ್ರ ಅಭಿಪ್ರಾಯಪಟ್ಟರು.
ಜಯಲಕ್ಷ್ಮೀಪುರಂನಲ್ಲಿರುವ ನೇಗಿಲ ಯೋಗಿ ಸಭಾಂಗಣದಲ್ಲಿ ಮೈಸೂರು ದಾಸೋಹ ಮತ್ತು ಜೆ.ಎಲ್.ಎಸ್ ಪ್ರಕಾಶವ ವತಿಯಿಂದ ಆಯೋಜಿಸಿದ್ದ ೯೨ನೇ ಸಾಹಿತ್ಯ ದಾಸೋಹ ಹಾಗೂ ಬಿ.ಪಿ ಅಶ್ವತ್ಥನಾರಾಯಣ ಅವರ ರಸರಾಮಾಯಣ ಒಂದು ರಸ ಸ್ಪಂದನೆ ಎಂಬ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಮಾಯಣ ಪ್ರವಹಿಸುವ ಗಂಗೆಯಂತೆ. ಹರಿಯುತ್ತ ಹರಿಯುತ್ತ ಹಳ್ಳ ಕೊಳ್ಳವಾಗಿ ನದಿಯಾಗಿ ರಾಮಾಯಣ ಕಾವ್ಯಾತ್ಮಕವಾಗಿ ಹರಿಯುತ್ತದೆ ಎಂದು ಹೇಳಿದರು.
ಕುಮಾರ ವ್ಯಾಸರು ಭಾರತ ಬರೆಯವಾಗ ರಾಮಾಯಣದ ಬಗ್ಗೆ ಉಲ್ಲೇಖಿಸುವುದನ್ನು ಗಮನಿಸಿದಾಗ, ನನ್ನ ಪ್ರಕಾರ ಅವರಿಗೂ ರಾಮಾಯಣ ಬರೆಯುವ ಆಸೆಯಿತ್ತು ಎಂಬುದು ಗೊತ್ತಾಗುತ್ತದೆ. ರಾಮಾಯಣವನ್ನು ಅನೇಕರು ಬರೆದಿದ್ದಾರೆ. ಕವಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಛಂದಸ್ಸಿನಲ್ಲಿ ಅದು ನಡೆದ ಹಾದಿಯೇ ಬೇರೆ. ಅದರಂತೆ ಗಜಾನನ ಈಶ್ವರ ಹೆಗಡೆ ಅವರು ತಮ್ಮದೇ ಆದ ಶೈಲಿಯಲ್ಲಿ ರಸ ರಾಮಾಯಣವನ್ನು ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ಇಲ್ಲಿ ಕಥೆ ಪ್ರಧಾನವಲ್ಲ. ಪಾತ್ರಗಳನ್ನು ಅಲ್ಲಲ್ಲಿ ಮುಕ್ತಕ ಛಂದಸ್ಸಿನಲ್ಲಿ ಬರೆದು ರಸಕ್ಕೆ ಪ್ರಾಧಾನ್ಯತೆ ನೀಡಿದ್ದಾರೆ. ಕಾವ್ಯದ ಜೀವ ರಸವಾಗಬೇಕು. ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ರಸಜೀವಕ್ಕೆ ಹೊತ್ತು ನೀಡಿದ್ದಾರೆ. ತನ್ನ ಕಾವ್ಯವನ್ನು ಹೆಣ್ಣಿಗೆ ಹೋಲಿಕೆ ಮಾಡಿದ್ದಾರೆ. ರಸ ರಾಮಾಯಣವನ್ನೇ ಸೃಷ್ಠಿ ಮಾಡಿಕೊಟ್ಟಿದ್ದಾರೆ. ಕೃತಿಯಲ್ಲಿರುವ ತಾಯಿತನ ಎಂಬ ಶಿರ್ಷಿಕೆಯಲ್ಲಿ ರಾಮಾಯಣದಲ್ಲಿ ಬರುವ ಆಸ್ಥಾನದ ಸೇವಕಿ ಮಂಥರೇಯ ಬಗ್ಗೆ ಹೇಳುತ್ತದೆ . ಮಕ್ಕಳಾಗದಿದ್ದರೇನು ತಾಯಿತನದ ಭಾವಕ್ಕೆ ಅಭಾವವೇ ಮಗನನ್ನು ಭರತನಲ್ಲಿ ಕಂಡಳು ಎಂಬ ಸಾಲು ತಾಯಿಯ ಮಮಕಾರದ ಬಗ್ಗೆ ತಿಳಿಸುತ್ತದೆ. ಕೃತಿಯಲ್ಲಿ ರಾಮಾಯಣದ ಏಳು ಕಾಂಡಗಳ ಬಗ್ಗೆ ಬರೆದಿದ್ದಾರೆ. ಇದರಿಂದ ಸ್ಪೂರ್ತಿಗೊಂಡು ಇನ್ನುಳಿದ ಕಾಂಡಗಳನ್ನು ಬರೆಯಲಿ ಎಂದು ಹಾರೈಸಿದರು.
ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕಿ ಡಾ.ಪ್ರಸನ್ನಾಕ್ಷಿ ಮಾತನಾಡಿ, ರಾಮಾಯಣ ಕಾಂಡವನ್ನು ಅಸ್ವಾದಿಸುವುದೇ ಈ ಕೃತಿಯ ಉದ್ದೇಶ. ರಸ ರಾಮಾಯಣ ನಾನು ಆಸ್ವಾದಿಸಿದ್ದೇನೆ. ಈ ಕೃತಿಯಲ್ಲಿ ಬಿಪಿ ಅಶ್ವತ್ಥ ನಾರಾಯಣ ಅವರ ಪಾಂಡಿತ್ಯ ಎಂತದ್ದು ಎಂದು ತಿಳಿಯುತ್ತದೆ. ಅವರಲ್ಲಿವವರು ಅಧಯನದ ವಿಷಯಗಳನ್ನು ನಾವು ತಿಳಿದುಕೊಳ್ಳಬೇಕು ಎಂದರು.
ಕಾಯಕ್ರಮದ ಅಧಕ್ಷತೆಯನ್ನು ಬಿ.ಪಿ.ಅಶ್ವತ್ಥನಾರಾಯಣ ವಹಿಸಿದ್ದರು. ಗಜಾನನ ಈಶ್ವರ ಹೆಗಡೆ, ಸಾಹಿತ್ಯ ದಾಸೋಹದ ಸಂಚಾಲಕ ಎಂ.ಆರ್.ಆನಂದ್ ಹಾಗೂ ಪದ್ಮ ಆನಂದ್ ಇದ್ದರು.

RELATED ARTICLES
- Advertisment -
Google search engine

Most Popular