ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ಬಾಂಬರ್ ಬಗ್ಗೆ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬುಧವಾರ 10 ಲಕ್ಷ ರೂ. ನಗದು ಬಹುಮಾನ ಘೋಷಿಸಿದೆ. ಎನ್ಐಎ ಬಿಡುಗಡೆ ಮಾಡಿರುವ ಭಾವಚಿತ್ರದಲ್ಲಿ ವ್ಯಕ್ತಿಯ ಅರ್ಧ ಮುಖ ಮಾತ್ರ ಕಂಡಿದೆ. ಹೀಗಾಗಿ ಅಧಿಕಾರಿಗಳ ತನಿಖೆಗೆ ಸಹಾಯವಾಗಲೆಂದು ಚಿತ್ರಗಾರರೊಬ್ಬರು ಬಾಂಬರ್ನ ಪೂರ್ತಿ ಮುಖದ ಇಮ್ಯಾಜಿನರಿ ಸ್ಕೆಚ್ ಬಿಡಿಸಿದ್ದಾರೆ.
ಎನ್ಐಎ ಬಿಡುಗಡೆ ಮಾಡಿದ ಸಿಸಿಟಿವಿ ಭಾವಚಿತ್ರವನ್ನು ಆಧಾರವಾಗಿಟ್ಟುಕೊಂಡು ಚಿತ್ರಗಾರ ಹರ್ಷ ಅವರು ಆರೋಪಿ ಪೂರ್ಣ ಮುಖವನ್ನು ಊಹಿಸಿಕೊಂಡು ಚಿತ್ರ ಬಿಡಿಸಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಶಂಕಿತ ಉಗ್ರ ಮಾಸ್ಕ್ ಧರಿಸಿದ ರೀತಿಯಲ್ಲಿ ಹಾಗೂ ವಿತೌಟ್ ಮಾಸ್ಕ್ ಟೋಪಿ ಕನ್ನಡಕ ಧರಿಸಿದ ರೀತಿ ಚಿತ್ರ ಬಿಡಿಸಿದ್ದಾರೆ. ಈ ಇಮ್ಯಾಜಿನರಿ ಸ್ಕೆಚ್ ತನಿಖೆಗೆ ಸಹಾಯವಾಗಬಹುದೆಂದು ಬೆಂಗಳೂರು ಪೊಲೀಸ್ ಮತ್ತು ಎನ್ಐಎಗೆ ಟ್ಯಾಗ್ ಮಾಡಿದ್ದಾರೆ.