Saturday, April 19, 2025
Google search engine

Homeಅಪರಾಧರಸ್ತೆಗಳಲ್ಲಿ ಅಡ್ಡ ದಿಡ್ಡಿ ಪಾರ್ಕಿಂಗ್:ಚುರುಕು ಮುಟ್ಟಿಸಿದ ಟ್ರಾಫಿಕ್ ಪೊಲೀಸರು

ರಸ್ತೆಗಳಲ್ಲಿ ಅಡ್ಡ ದಿಡ್ಡಿ ಪಾರ್ಕಿಂಗ್:ಚುರುಕು ಮುಟ್ಟಿಸಿದ ಟ್ರಾಫಿಕ್ ಪೊಲೀಸರು

ನಂಜನಗೂಡು : ನಗರದಲ್ಲಿ ಕಂಡ ಕಂಡಲ್ಲಿ ರಸ್ತೆಗಳಲ್ಲಿ ತಮಗೆ ಇಷ್ಟ ಬಂದ ರೀತಿ ವಾಹನಗಳನ್ನು ನಿಲ್ಲಿಸಿ ದಬ್ಬಾಳಿಕೆ ಮಾಡುತ್ತಿದ್ದ ಸ್ಕೂಟರ್ ಕಾರು ಮಾಲೀಕರಿಗೆ ಕಾರಿನ ಚಕ್ರಕ್ಕೆ ಲಾಕ್ ಮಾಡಿ ಟ್ರಾಫಿಕ್ ಪಿಎಸ್ಐ ಜಯರಾಮ್ ಚುರುಕು ಮುಟ್ಟಿಸಿದ್ದಾರೆ.

ಆರ್ ಪಿ ರಸ್ತೆ ,ಎಂಜಿಎಸ್ ರಸ್ತೆ, ಚಿಂತಾಮಣಿ ಗಣಪತಿ ಗುಡಿ ಸರ್ಕಲ್ ಮತ್ತು ಹುಲ್ಲಹಳ್ಳಿ ಸರ್ಕಲ್ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಗಳಲ್ಲಿ ಸ್ಕೂಟರ್ ಗಳು ಮತ್ತು ಕಾರುಗಳು ಮಾಲೀಕರು ತಮಗೆ ಇಷ್ಟ ಬಂದ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿ, ಗಂಟೆಗಟ್ಟಲೆ ಹೋಗುತ್ತಿದ್ದರು. ಇಲ್ಲಿ ಹೇಳುವರು ಮತ್ತು ಕೇಳುವರು ಇಲ್ಲದೆ ಕಾನೂನು ಉಲ್ಲಂಘಿಸಿ ಬಹಳ ತೊಂದರೆ ನೀಡುತ್ತಿದ್ದರು. ಇತ್ತೀಚಿನ ತಿಂಗಳುಗಳಲ್ಲಿ ಬಂದಂತಹ ನೇರ ನುಡಿ ಅಧಿಕಾರಿ ಪಿಎಸ್ಐ ಜಯರಾಮ್ ಬಂದ ಮೇಲೆ ಸಿಂಹ ಸ್ವಪ್ನವಾಗಿ ಕಾರ್ಯನಿರ್ವಹಿಸುತ್ತಿದ್ದು ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಒಂದು ಮಟ್ಟಕ್ಕೆ ತಂದಿದ್ದಾರೆ. ಇದರ ಜೊತೆಗೆ ರಸ್ತೆಗಳಲ್ಲಿ ತಳ್ಳುವ ಗಾಡಿಗಳು ಮಿತಿಮೀರಿ ರಸ್ತೆಗಳಲ್ಲಿ ನಿಲ್ಲಿಸಿ ಕೊಂಡು ಬಹಳ ತೊಂದರೆ ಉಂಟಾಗಿತ್ತು. ಇದನ್ನು ಕೂಡ ತಮ್ಮ ವಾಹನದಲ್ಲೇ ಓಡಾಡಿಕೊಂಡು ಅನೌನ್ಸ್ ಮಾಡುವ ಮೂಲಕ ಹತೋಟಿಗೆ ತಂದಿದ್ದಾರೆ. ಇಂಥ ಅಧಿಕಾರಿಗಳು ಇರಬೇಕು ಅನ್ನೋದೇ ಸಾರ್ವಜನಿಕರ ಆಶಯ.

RELATED ARTICLES
- Advertisment -
Google search engine

Most Popular