ಮಂಡ್ಯ: ಕೆ.ಆರ್.ಎಸ್ ನಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹಿನ್ನಲೆ ರಂಗನತಿಟ್ಟು ಪಕ್ಷೀಧಾಮದಲ್ಲಿನ ನಡುಗಡ್ಡೆಗಳು ಮುಳುಗಡೆಯಾಗಿದ್ದು, ಪ್ರವಾಹದದ ನೀರಿಂದ ಪಕ್ಷಿ ಸಂಕುಲ ಆತಂಕಕ್ಕೀಡಾಗಿವೆ.
ಮರ ಕೆಳಗಿದ್ದ ಪಕ್ಷಿಗೂಡುಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ. ಗೂಡು ಕಳೆದುಕೊಂಡ ಪಕ್ಷಿಗಳು ಮರದ ತುತ್ತತುದಿಯಲ್ಲಿಆಶ್ರಯ ಪಡೆದಿವೆ.
ಪ್ರವಾಹದ ಮುನ್ನೆಚ್ಚರಿಕೆ ಕ್ರಮವಾಗಿ ನದಿ ನೀರು ಹೆಚ್ಚಳವಾಗಿರುವ ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದ್ದು, ಪಕ್ಷಿಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಪ್ರವಾಸಿಗರಿಲ್ಲದೆ ರಂಗನತಿಟ್ಟು ಪಕ್ಷಿಧಾಮ ಬಣಗುಡುತ್ತಿದೆ.