ಮೈಸೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ೨೦೨೩ರಲ್ಲಿ ಉತ್ತಮ ರ್‍ಯಾಂಕಿಂಗ್ ಪಡೆದ ವಿದ್ಯಾರ್ಥಿಗಳನ್ನು ಆಕಾಶ್ ಬೈಜುಸ್ ವತಿಯಿಂದ ಸನ್ಮಾನಿಸಲಾಯಿತು.
ನಗರದ ಆಕಾಶ್ ಬೈಜುಸ್‌ನ ಸಬರ್ಬನ್ ಶಾಖೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉತ್ತಮ ರ್‍ಯಾಂಕಿಂಗ್ ಪಡೆದಿರುವ ಮೊಹಮ್ಮದ್ ಸುಲೇಮಾನ್, ನಿಧಿ ಎಂ.ಕಾಮತ್, ತನಿರಿಕಾ ಶ್ರೀನಾಥ್ ಅವರನ್ನು ಸನ್ಮಾನಿಸಲಾಯಿತು. ಮೊಹಮ್ಮದ್ ಸುಲೇಮಾನ್ ಒಟ್ಟು ೭೨೦ ಅಂಕಗಳಿಗೆ ೬೭೬ ಅಂಕ ಪಡೆಯುವ ಮೂಲಕ ನೀಟ್ ಪರೀಕ್ಷೆಯಲ್ಲಿ ಮೈಸೂರು ನಗರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅಖಿಲ ಭಾರತ ಮಟ್ಟದಲ್ಲೂ ೧೯೧೩ನೇ ರ್‍ಯಾಂಕ್ ಪಡೆದಿದ್ದಾರೆ. ನಿಧಿ ಎಂ.ಕಾಮತ್ ೬೫೮ ಅಂಕ ಪಡೆಯುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ ೫೦೭೯ನೇ ರ್‍ಯಾಂಕ್ ಪಡೆದಿದ್ದಾರೆ. ತನಿರಿಕಾ ಶ್ರೀನಾಥ್ ೬೫೨ ಅಂಕ ಪಡೆಯುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ ೬೩೪೦ನೇ ರ್‍ಯಾಂಕ್ ಗಳಿಸಿದ್ದಾರೆ. ಸದರಿ ಸೆಂಟರ್‌ನಲ್ಲಿ ತರಬೇತಿ ಪಡೆದ ಹತ್ತಾರು ವಿದ್ಯಾರ್ಥಿಗಳು ೫೦೦ಕ್ಕೂ ಹೆಚ್ಚು ಅಂಕ ಪಡೆಯುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ ಉತ್ತಮ ರ್‍ಯಾಂಕ್ ಪಡೆದು ಗಮನ ಸೆಳೆದಿದ್ದಾರೆ.
ಆಕಾಶ್ ಬೈಜುಸ್‌ನ ಕರ್ನಾಟಕ ಸೌತ್ ಶಾಖೆಗಳ ಹಿರಿಯ ನಿರ್ದೇಶಕ ಜೆ.ಅನಿಲ್ ಕುಮಾರ್ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಬಳಿಕ ಮಾತನಾಡಿ, ನಮ್ಮ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸುತ್ತೇವೆ. ಅವರ ಸಾಧನೆ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಬಗ್ಗೆ ತಿಳಿಸುತ್ತದೆ. ವಿದ್ಯಾರ್ಥಿಗಳ ಪ್ರಯತ್ನ, ನಮ್ಮ ಆಕಾಶ್ ಬೈಜುಸ್‌ನ ಅಧ್ಯಾಪಕರ ಸರಿಯಾದ ಮಾರ್ಗದರ್ಶನ ಮತ್ತು ನಾವು ನೀಡಲಾದ ಗುಣಮಟ್ಟದ ಪಾಠ, ಪೋಷಕರ ನಿರಂತರ ಬೆಂಬಲವೂ ವಿದ್ಯಾರ್ಥಿಗಳ ಈ ಸಾಧನೆಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿ ಮೊಹಮ್ಮದ್ ಸುಲೇಮಾನ್ ಮಾತನಾಡಿ, ನೀಟ್ ಪರೀಕ್ಷೆಯಲ್ಲಿ ನಾನು ಉತ್ತಮ ರ್‍ಯಾಂಕ್ ಪಡೆಯಲು ಆಕಾಶ ಬೈಜುಸ್‌ನಲ್ಲಿ ಕೋಚಿಂಗ್ ಪಡೆದಿದ್ದು ಪ್ರಮುಖ ಕಾರಣವಾಗಿದೆ. ಇಲ್ಲಿನ ಆನ್‌ಲೈನ್ ಮತ್ತು ಆಫ್‌ಲೈನ್ ತರಗತಿಗಳು ನನಗೆ ಸಹಕಾರಿಯಾಗಿವೆ. ನನ್ನ ಪೋಷಕರು ಕೂಡ ನನಗೆ ಉತ್ತಮ ಸಹಕಾರ ನೀಡಿದ್ದಾರೆ. ಹಾಗಾಗಿ ೬೭೬ ಅಂಕ ಪಡೆಯಲು ಸಹಕಾರಿಯಾಯಿತು ಎಂದರು.
ನಿಧಿ ಎಂ.ಕಾಮತ್ ಮಾತನಾಡಿ, ಅಧ್ಯಾಪಕರು, ನಮ್ಮ ಪೋಷಕ ಹಾಗೂ ಸ್ನೇಹಿತರ ಸಹಕಾರದಿಂದ ನಾನು ನೀಟ್‌ನಲ್ಲಿ ಉತ್ತಮ ಫಲಿತಾಂಶ ಪಡೆದಿzನೆ ಎಂದರು.
ತನಿರಿಕಾ ಶ್ರೀನಾಥ್ ಮಾತನಾಡಿ, ೨ ವರ್ಷಗಳ ಕಾಲ ಆಕಾಶ್ ಬೈಜುಸ್‌ನಲ್ಲಿ ತರಬೇತಿ ಪಡೆದಿzನೆ. ಕೋವಿಡ್ ಕಾರಣಕ್ಕೆ ಮೊದಲ ವರ್ಷ ಆನ್‌ಲೈನ್ ತರಬೇತಿ ಪಡೆದೆ. ನಂತರ ಆಫ್‌ಲೈನ್ ತರಬೇತಿ ಪಡೆದೆ. ಇದು ನನಗೆ ಸಹಕಾರಿಯಾಯಿತು. ಜತೆಗೆ ನನ್ನ ಪೋಷಕರು ಕೂಡ ಇದಕ್ಕೆ ಮುಖ್ಯ ಕಾರಣ ಎಂದರು.
ಆಕಾಶ್ ಬೈಜುಸ್‌ನ ಸಹಾಯಕ ನಿರ್ದೇಶಕ ಡಾ.ವಿಕ್ರಂ ಚಕ್ರವರ್ತಿ, ವಲಯ ಅಧಿಕಾರಿ ಮನೀಶ್ ಕುಮಾರ್, ಮೈಸೂರು ಸಬರ್ಬನ್ ಶಾಖೆಯ ಮುಖ್ಯಸ್ಥ ದೀಪಕ್, ಅನಿಲ್‌ಕುಮಾರ್ ಇತರರಿದ್ದರು.