Monday, April 14, 2025
Google search engine

Homeಅಪರಾಧಅಪ್ರಾಪ್ತ ವಿಶೇಷ ಭಿನ್ನ ಸಾಮರ್ಥ್ಯದ ಬಾಲಕಿಯ ಅತ್ಯಾಚಾರ:ಆರೋಪಿಗಳ ಬಂಧನ

ಅಪ್ರಾಪ್ತ ವಿಶೇಷ ಭಿನ್ನ ಸಾಮರ್ಥ್ಯದ ಬಾಲಕಿಯ ಅತ್ಯಾಚಾರ:ಆರೋಪಿಗಳ ಬಂಧನ

ಮಂಗಳೂರು(ದಕ್ಷಿಣ ಕನ್ನಡ): ಭಿನ್ನ ಸಾಮರ್ಥ್ಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಂಗಳೂರಿನ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಬಿಹಾರದ ಪ್ರಸ್ತುತ ಮುಂಬೈಯಲ್ಲಿ ವಾಸವಾಗಿರುವ ಅಬ್ದುಲ್ ಹಲೀಂ (37) ಹಾಗೂ ಕುಲಶೇಖರದ ಶಮೀರಾ ಬಾನು (22) ಬಂಧಿತ ಆರೋಪಿಗಳು. ದೂರುದಾರರು ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ಬಂದು ನೀಡಿದ ದೂರಿನಲ್ಲಿ ತನ್ನ ತಮ್ಮ ಮನ್ಸೂರ್ ಅಹ್ಮದ್ ಬಾಬಾ ಶೇಖ್ ಮತ್ತು ಆತನ ಪರಿಚಯಸ್ಥನಾದ ಬಿಹಾರ ಮೂಲದ ಈಗ ಮುಂಬೈಯಲ್ಲಿ ವಾಸವಿರುವ ಅಬ್ದುಲ್ ಹಲೀಂ ರವರು ತಮ್ಮ ಬೈಕಿನಲ್ಲಿ ಕಾಸರಗೋಡಿಗೆ ಹೋಗಿ ವಾಪಾಸು ಬರುತ್ತಿದ್ದಾಗ ಮಂಜೇಶ್ವರ ಹೊಸಂಗಡಿ ಮಧ್ಯೆ ಬೈಕ್ ಅಪಘಾತವಾಗಿತ್ತು. ಇದರಿಂದ ಇಬ್ಬರೂ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು‌.

ಇಬ್ಬರು ಗಾಯಾಳು ಆಸ್ಪತ್ರೆಯ ಒಂದೇ ರೂಮ್ ನಲ್ಲಿ ಮಧ್ಯ ಸ್ಕ್ರೀನ್ ಹಾಕಿಸಿ ಬೇರೆ ಬೇರೆ ರೂಮ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದೂರುದಾರರು ಮತ್ತು ಅವರ ದೊಡ್ಡ ಮಗಳು ಅಪಘಾತದ ಬಗ್ಗೆ ವಿಚಾರಿಸಲು ಮಂಜೇಶ್ವರ ಠಾಣೆಗೆ ಹೋಗಿದ್ದರು. ಇದೇ ವೇಳೆ ದೂರುದಾರರ ತಮ್ಮ ಮನ್ಸೂರ್ ಅಹ್ಮದ್‌ ಬಾಬಾ ಶೇಖ್ ರವರ ಹೆಂಡತಿ ಶಮೀನಾ ಬಾನು ಜೊತೆ ದೂರುದಾರರು ತಮ್ಮ ವಿಶೇಷ ಭಿನ್ನ ಸಾಮಾರ್ಥ್ಯದ ಅಪ್ರಾಪ್ತ ಮಗಳನ್ನು ಬಿಟ್ಟು ಹೋಗಿದ್ದರು. ಈ ಸಮಯದಲ್ಲಿ ದೂರುದಾರರ ತಮ್ಮನ ಹೆಂಡತಿ ಶಮೀನಾ ಬಾನು ಆರೋಪಿತನಾದ ಅಬ್ದುಲ್ ಹಲೀಂ ಜೊತೆ ಸೆಕ್ಸ್ ಮಾಡುತ್ತಿದ್ದ ಸಮಯ ವಿಶೇಷ ಭಿನ್ನ ಸಾಮರ್ಥ್ಯದ ಅಪ್ರಾಪ್ತ ಹುಡುಗಿ ನೋಡಿರುವುದನ್ನು ನೋಡಿದ ಶಮೀನಾ ಬಾನು ವಿಶೇಷ ಭಿನ್ನ ಸಾಮರ್ಥ್ಯದ ಅಪ್ರಾಪ್ತ ಹುಡುಗಿಯನ್ನು ಕರೆದು ಬೆಡ್ ಮೇಲೆ ಕುಳ್ಳಿರಿಸಿದ್ದಾಳೆ.

ಆಗ ಆರೋಪಿತ ಅಬ್ದುಲ್ ಹಲೀಂ ವಿಶೇಷ ಭಿನ್ನ ಸಾಮರ್ಥ್ಯದ ಅಪ್ರಾಪ್ತ ಹುಡುಗಿಯ ಎದೆಗೆ ಕೈ ಹಾಕಿದಾಗ ಆಕೆ ಬಿಡದೇ ಇದ್ದಾಗ ಶಮೀನಾ ಬಾನುವಿನ ಸಹಕಾರದಿಂದ ಆರೋಪಿತ ಅಬ್ದುಲ್ ಹಲೀಂ ವಿಶೇಷ ಭಿನ್ನ ಸಾಮರ್ಥ್ಯದ ಅಪ್ರಾಪ್ತ ಹುಡುಗಿಯನ್ನು ಅತ್ಯಾಚಾರ ಮಾಡಿದ್ದಾನೆ ಎಂಬುದಾಗಿ ನೊಂದ ಯುವತಿಯ ತಾಯಿ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಠಾಣೆಯಲ್ಲಿ ಅ.ಕ್ರ 71/2023 ಕಲಂ 376, 109 ಐ.ಪಿ.ಸಿ & ಕಲಂ: 5 (K), 5(1), 6, 17 ಫೋಕ್ಸು(Pocso) ಕಾಯಿದೆ ಯಂತೆ ಕೇಸು ದಾಖಲಾಗಿದೆ. ಈ ಪ್ರಕರಣದಲ್ಲಿ ಆರೋಪಿತೆಯಾದ ಶಮೀನಾ ಬಾನು ಎಂಬಾಕೆಯನ್ನು ದಸ್ತಗಿರಿ ಪಡಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಪ್ರಕರಣದಲ್ಲಿ ಆರೋಪಿತನಾದ ಮುಂಬೈ ಮೂಲದ ಅಬ್ದುಲ್ ಹಲೀಂ ನು ದಿನಾಂಕ 16-08-2023 ರಂದು ಮಂಗಳೂರಿನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಬಗ್ಗೆ ಮಂಗಳೂರು ಮಹಿಳಾ ಪೊಲೀಸ್ ಠಾಣಾ ನಿರೀಕ್ಷಕರು ಮತ್ತು ಸಿಬ್ಬಂದಿಯವರು ಖಚಿತ ಮಾಹಿತಿಯನ್ನು ಪಡೆದು ಗೋವಾ ರಾಜ್ಯದ ಮಡಗಾಂವ್ ಪೊಲೀಸರಿಗೆ ಮಾಹಿತಿ ನೀಡಿ ಅವರ ಸಹಕಾರದೊಂದಿಗೆ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಇತ್ತೀಚೆಗೆ ಅಪ್ರಾಪ್ತ ಹೆಣ್ಣುಮಕ್ಕಳ ಹಾಗೂ ವಿಶೇಷ ಭಿನ್ನ ಸಾಮರ್ಥ್ಯದ ಹೆಣ್ಣುಮಕ್ಕಳ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೋಷಕರಲ್ಲಿ ಹಾಗೂ ಜನ ಸಾಮಾನ್ಯರಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಹಾಗೂ ವಿಶೇಷ ಭಿನ್ನ ಸಾಮರ್ಥ್ಯದ ಹೆಣ್ಣುಮಕ್ಕಳನ್ನು ಸಂಬಂಧಿಕರ ಜೊತೆಯಲ್ಲಿ ಕಳುಹಿಸುವಾಗ ಅಥವಾ ನಿಲ್ಲಿಸುವಾಗ ಅತ್ಯಂತ ನಿಗಾ ವಹಿಸಬೇಕು ಎಂದು ಮಂಗಳೂರು ನಗರದ ಪೊಲೀಸ್ ಕಮಿಷನರ್ ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular