Saturday, April 19, 2025
Google search engine

Homeಅಪರಾಧಅಪ್ರಾಪ್ತೆ ಮೇಲೆ ಅತ್ಯಾಚಾರ: ಯುವಕನ ಬಂಧನ

ಅಪ್ರಾಪ್ತೆ ಮೇಲೆ ಅತ್ಯಾಚಾರ: ಯುವಕನ ಬಂಧನ

ಮೈಸೂರು : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಯುವಕನೊಬ್ಬನನ್ನು ನಂಜನಗೂಡು ನಗರ ಪೊಲೀಸರು ಬಂಧಿಸಿದ್ದಾರೆ.

ನಂಜನಗೂಡು ಪಟ್ಟಣದ ಕೆ.ಹೆಚ್.ಬಿ.ಕಾಲೋನಿಯ ನಿವಾಸಿ ಆದರ್ಶ್(೨೦) ಬಂಧಿತ ಆರೋಪಿ. ಈತ ನಂಜನಗೂಡು ನಗರದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಬಾಲಕಿಯ ತಾಯಿ ನಂಜನಗೂಡು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಪೊಲೀಸರು ಯುವಕನನ್ನು ಬಂಧಿಸಿ ಆತನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿದ್ದು, ಜಿಲ್ಲಾ ನ್ಯಾಯಾಧೀಶರ ಮುಂದೆ ಆರೋಪಿಯನ್ನು ಹಾಜರುಪಡಿಸಿದ್ದಾರೆ.

ನಂಜನಗೂಡು ಡಿವೈಎಸ್ಪಿ ರಘು ಅವರ ಸೂಚನೆ ಮೇರೆಗೆ ಪಿಎಸ್‌ಐ ಪ್ರಕಾಶ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular