Saturday, April 19, 2025
Google search engine

Homeರಾಜ್ಯಕಾಡಾನೆ ಹಾವಳಿ ನಿಯಂತ್ರಣಕ್ಕೆ ಶೀಘ್ರ ತಡೆಗೋಡೆ ನಿರ್ಮಾಣ : ಸಂಸದ ಮಂಜುನಾಥ್

ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶೀಘ್ರ ತಡೆಗೋಡೆ ನಿರ್ಮಾಣ : ಸಂಸದ ಮಂಜುನಾಥ್

ರಾಮನಗರ : ಇತ್ತೀಚಿಗೆ ರಾಜ್ಯದಲ್ಲಿ ಕಾಡಾನೆಗಳ ಹಾವಳಿಯಿಂದ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.ಅಲ್ಲದೆ ವಿದ್ಯುತ್ ತಂತಿ ತಗುಲಿ ಕಾಡಾನೆಗಳು ಕೂಡ ಸಾವನಪ್ಪಿವೆ. ಆದ್ದರಿಂದ ಆನೆಗಳ ಹಾವಳಿ ಶಾಶ್ವತವಾಗಿ ತಪ್ಪಿಸುವಂತೆ ಗಡಿ ಭಾಗಗಳಲ್ಲಿ ತಡೆಗೋಡೆಗಳನ್ನು ನಿರ್ಮಾಣ ಮಾಡಲು ಕನಕಪುರ ತಾಲೂಕಿನ ವಲಯ ಅರಣ್ಯ ಅಧಿಕಾರಿಗಳಿಗೆ ಸಂಸದ ಡಾ. ಮಂಜುನಾಥ್ ಸೂಚಿಸಿದರು.

ಜಿಲ್ಲೆಯ ಕನಕಪುರ ತಾಲೂಕಿನ ಅರಣ್ಯ ವ್ಯಾಪ್ತಿ ಸಮೀಪದ ಗಡಿ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಿಸಲು ಶಾಶ್ವತ ತಡೆಗೋಡೆಗಳನ್ನು ನಿರ್ಮಿಸುವಂತೆ ವಲಯ ಅರಣ್ಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ಇಂದು ವಲಯ ಅರಣ್ಯ ಅಧಿಕಾರಿಗಳನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಸಾತನೂರು ಅರಣ್ಯ ವಲಯ ಹಾಗೂ ಚನ್ನಪಟ್ಟಣ, ಕನಕಪುರ ಅರಣ್ಯ ವಲಯದ ಗ್ರಾಮಗಳ ಮೇಲೆ ಕಾಡಾನೆಗಳು ನಿರಂತರ ದಾಳಿ ನಡೆಸುತ್ತಿರುವುದರಿಂದ ಅಮಾಯಕ ರೈತರು ಮತ್ತು ಗ್ರಾಮಸ್ಥರ ಸಾವು ಹಾಗೂ ಬೆಳೆಗಳ ನಾಶದಿಂದಾಗಿ ಈ ಭಾಗದ ಜನ ಪರಿತಪಿಸುತ್ತಿದ್ದಾರೆ. ಆನೆ ದಾಳಿಯಿಂದ ನೊಂದ ರೈತರಿಗೆ ಈವರೆಗೂ ೧೭ ಕೋಟಿ ರು.ಗಳ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular