Sunday, April 20, 2025
Google search engine

Homeರಾಜ್ಯಸುದ್ದಿಜಾಲರಾಷ್ಟ್ರೀಯ ಲೋಕ ಅದಾಲತ್

ರಾಷ್ಟ್ರೀಯ ಲೋಕ ಅದಾಲತ್

೨೦೧ ಕೋಟಿ ರೂ.ಗಳಿಗೆ ಹೆಚ್ಚಿನ ಮೊತ್ತ ವಸೂಲು:೧,೪೯,೪೮೫ ಪ್ರಕರಣ ಇತ್ಯರ್ಥ

ರಾಮನಗರ: ನವದೆಹಲಿಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಇತ್ತೀಚೆಗೆ ಜಿಲ್ಲೆಯ ನ್ಯಾಯಾಲಯಗಳಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥವಾಗಬಹುದಾದ ಪ್ರಕರಣಗಳನ್ನು ಇತ್ತೀಚೆಗೆ ಜರುಗಿದ ಲೋಕ್ ಅದಾಲತ್ ನಲ್ಲಿ ವಿಚಾರಣೆ ಕೈಗೊಳ್ಳಲಾಯಿತು.

ಜಿಲ್ಲೆಯರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ನ್ಯಾಯಾಲಯಗಳು ಸೇರಿದಂತೆ ಒಟ್ಟು ೧೯ ಪೀಠಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಆಯೋಜಿಸಲಾಗಿತ್ತು. ಈ ಲೋಕ ಅದಲಾತ್‌ಗೆ ಜಿಲ್ಲೆಯಾದ್ಯಂತ ವಿಚಾರಣೆಗೆ ಬಾಕಿ ಇರುವ ಒಟ್ಟು ೫೪,೦೭೭ ಪ್ರಕರಣಗಳಲ್ಲಿ ೩,೦೨೬ ಪ್ರಕರಣಗಳನ್ನು ಹಾಗೂ ೧,೪೬,೪೫೯ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರೆದಂತೆ ಒಟ್ಟಾರೆ ೧,೪೯,೪೮೫ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು. ಈ ಸಂದರ್ಭದಲ್ಲಿ ಒಟ್ಟು ೨೦೧,೪೧,೨೮,೧೫೮ ರೂ.ಗಳನ್ನು ವಸೂಲಿ ಮಾಡಿಕೊಳ್ಳಲಾಯಿತು.

ರಾಮನಗರ ನಗರ ಜಿಲ್ಲೆಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡ ಪ್ರಕರಣಗಳ ವಿವರ:
೩೬ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣಗಳು, ೬೭ನೆಗೋಷಬಲ್ ಇನ್ಸ್‌ಟ್ರೂಮೆಂಟ್ ಕಾಯಿದೆ (ಎನ್‌ಐ ಆಕ್ಟ್) ಪ್ರಕರಣಗಳು, ೧೭ ಸಾಲ ವಸೂಲಾತಿ ಪ್ರಕರಣಗಳು, ೬೭ ಮೋಟಾರು ವಾಹನ ಅಪಘಾತ ಪ್ರಕರಣ, ೧೦ಕಾರ್ಮಿಕ ವಿವಾದ ಪ್ರಕರಣಗಳು,೦೭ ಗಣಿ ಮತ್ತು ಭೂ ವಿಜ್ಞಾನ ಪ್ರಕರಣಗಳು,೦೨ ವೈವಾಹಿಕ ಪ್ರಕರಣಗಳು,೫೧ ಆಸ್ತಿ ವಿಭಾಗ ಪ್ರಕರಣಗಳು,೪೨ ನಿರ್ಧಿಷ್ಟ ಪ್ರಕರಣಗಳು, ೧ ಅಂತಿಮ ಡಿಕ್ರಿ ಕಾರ್ಯಾಚರಣೆ ಪ್ರಕರಣ, ೧೫ಜಾರಿ ಪ್ರಕರಣಗಳು, ೧೧ ಎಂವಿಸಿ ಎಕ್ಸೆಕ್ಯೂಟಿವ್ ಪ್ರಕರಣಗಳು,೩೮ ಹಕ್ಕು ಘೋಷಣೆ, ಶಾಶ್ವತ ನಿರ್ಭಂದಕಾಜ್ಞೆ ಹಾಗೂ ಇತರೆ,೯೫ ಜನನ ಹಾಗೂ ಮರಣ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಪ್ರಕರಣಗಳು, ೨,೫೪೧ಲಘು ವ್ಯಾಜ್ಯ ಪ್ರಕರಣಗಳು,೭ ಇತರೆ ಕ್ರಿಮಿನಲ್ ಪ್ರಕರಣಗಳು,೧೩ ಬ್ಯಾಂಕ್ ಮೊಕದ್ದಮೆ, ೧೨೫-ಸಿಆರ್.ಪಿಸಿ ಪ್ರಕರಣಕ್ಕೆ ಸಂಬಂಧಿಸಿದ ೩ ಪ್ರಕರಣಗಳು, ೩ ಡಿವಿ ಆಕ್ಟ್ಟ್, ೧,೪೬,೯,೪೫೯ ಪೂರ್ವ ದಾವೆ (ಪ್ರೀ ಲಿಟಿಗೇಷನ್) ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.


ಈ ರಾಷ್ಟ್ರೀಯ ಲೋಕ ಅದಾಲತ್‌ನ್ನು ಶ್ರೀ ಜಿ.ಡಿ. ಮಹವರ್ಕರ್, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅ/ಅ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಮನಗರ ರವರ ಮೇಲುಸ್ತುವಾರಿಯಲ್ಲಿ ನಿರ್ವಹಣೆ ಮಾಡಲಾಯಿತು ಎಂದು ರಾಮನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸವಿತ ಪಿ.ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular