Sunday, April 20, 2025
Google search engine

Homeಸ್ಥಳೀಯಅರಮನೆ ಆವರಣದಲ್ಲಿ ರಥಸಪ್ತಮಿಯ ಸಂಭ್ರಮ: 8 ದೇವರ ಉತ್ಸವ ಮೂರ್ತಿಗಳ ಸಮಾಗಮ

ಅರಮನೆ ಆವರಣದಲ್ಲಿ ರಥಸಪ್ತಮಿಯ ಸಂಭ್ರಮ: 8 ದೇವರ ಉತ್ಸವ ಮೂರ್ತಿಗಳ ಸಮಾಗಮ

ಮೈಸೂರು ಸಾಂಸ್ಕೃತಿಕ ನಗರಿ ಮೈಸೂರು ಅರಮನೆ ಆವರಣದಲ್ಲಿ ರಥ ಸಪ್ತಮಿ ಸಂಭ್ರಮ ಮನೆ ಮಾಡಿದೆ. ಅರಮನೆ ಆವರಣದಲ್ಲಿರುವ ವಿವಿಧ ದೇಗುಲಗಳ ಉತ್ಸವ ಮೂರ್ತಿಗಳ ಸಮಾಗಮವಾಗಿದೆ.

8 ರಥಗಳಲ್ಲಿ ಆವರಣಕ್ಕೆ ಆಗಮಿಸಿದ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ.ಮುಂಜಾನೆಯಿಂದಲೇ ಭಕ್ತರು ದಂಡು ಅರಮನೆಗೆ ಬರುತ್ತಿದೆ. ಉತ್ಸವ ಮೂರ್ತಿಗಳಿಗೆ ಭಕ್ತಭಾವದಿಂದ ನಮಿಸುತ್ತಿದ್ದಾರೆ.

ಗಾಯಿತ್ರಿ, ಸರಸ್ವತಿ, ಸಾವಿತ್ರಿ, ತ್ರಿಣೇಶ್ವರ ಸ್ವಾಮಿ, ಲಕ್ಷ್ಮಿ ವೆಂಟಕರಮಣ. ಖಿಲ್ಲೆ ವೆಂಕಟರಮಣ, ಶ್ವೇತ ವರಹಾ ಸ್ವಾಮಿ, ಮಹಾಲಕ್ಷ್ಮಿ ದೇವಿ ಸೇರಿ ಒಟ್ಟು 8 ದೇಗುಲಗಳ ಉತ್ಸವ ಮೂರ್ತಿಗಳಿಗೆ ಪೂಜೆ ನೆರವೇರಿದೆ. ಭಕ್ತರಿಗೆ ಒಂದೇ ಕಡೆ 8 ದೇವರುಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸೂರ್ಯದೇವ ತನ್ನ ಫಥ ಬದಲಾಯಿಸುವ ದಿನವಾದ ಇಂದು ಅರಮನೆ ಆವರಣದಲ್ಲಿ ಉತ್ಸವಮೂರ್ತಿಗಳಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ.ಇದೇ ವೇಳೆ ರಾಜವಂಶಸ್ಥ ಯದುವೀ‌ರ್ ರವರ ಧರ್ಮಪತ್ನಿ ತ್ರಿಶಿಕಾ ಯದುವೀರ್ ರವರು ಪುತ್ರ ಆದ್ಯವೀರ್ ಸಮೇತ ಆಗಮಿಸಿ ಉತ್ಸವಮೂರ್ತಿಗಳ ದರುಶನ ಪಡೆದರು.

RELATED ARTICLES
- Advertisment -
Google search engine

Most Popular