ಮಂಡ್ಯ: ರೌಡಿ ಶೀಟರ್ ಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸನ್ಮಾನ ಮಾಡಿಸಿರುವ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಪರೋಕ್ಷವಾಗಿ ಜಿಲ್ಲಾಡಳಿತವನ್ನ ಹೇಗೆ ಹಿಡಿತದಲ್ಲಿಟ್ಟುಕೊಂಡಿದ್ದಾರೆ ಎಂದು ಗೊತ್ತಾಗ್ತಿದೆ. ನಮ್ಮ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದರು.
ಮಂತ್ರಿ, ಸರ್ಕಾರ ಹಾಗೂ ಶಾಸಕರು ಅಧಿಕಾರ ಹೇಗೆ ನಡೆಸ್ತಿದ್ದಾರೆ ಎಂದು ಇದರಿಂದ ಗೊತ್ತಾಗ್ತಿದೆ. ಕಾನೂನು ಸುವ್ಯವಸ್ಥೆಗೆ ಮೊದಲ ಆದ್ಯತೆ ಕೊಡಬೇಕು. ಆದರೆ ಅಂತಹ ವಿಚಾರದಲ್ಲಿ ಫೇಲುರ್ ಆಗಿರುವುದು ವಿಪರ್ಯಾಸ ಎಂದು ಹೇಳಿದ್ದಾರೆ.
ಕಳೆದ 15 ದಿನಗಳ ಹಿಂದೆ ಒಂದು ಕೊಲೆ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಎಫ್ ಐ ಆರ್ ಆಗಿದ್ರು ಸಹ ಯಾವುದೇ ಕ್ರಮ ತೆಗೆದುಕೊಳ್ಳದೆ. ಒಬ್ಬ ಆರೋಪಿಗೆ ಸಚಿವರು, ಡಿಸಿ,ಎಸ್ಪಿ ಎದುರು ಸನ್ಮಾನ ಮಾಡುವುದು ನಾಚಿಕೆಗೇಡಿನ ಸಂಗತಿ. ಕಾನೂನಿನಗೆ ಗೌರವ ಕೊಡುವ ಕೆಲಸವನ್ನು ಎಲ್ಲರು ಮಾಡಬೇಕು ಎಂದು ಕಿಡಿಕಾರಿದರು.
ಜಿಲ್ಲಾಡಳಿತ ಯಾರ ಹಿಡಿತದಲ್ಲಿದೆ? ಜಿಲ್ಲಾ ಮಂತ್ರಿಗೆ ಏನು ವಿವೇಚನೆ ಇದೆ? ಇದೇ ರೀತಿ ರಾಜಕಾರಣ ಮಾಡಿದ್ರೆ ಮುಂದಿನ ದಿನಗಳಲ್ಲಿ ಅನಾಹುತಗಳ ಬಗ್ಗೆ ಚರ್ಚೆ ಮಾಡಬೇಕಾಗುತ್ತೆ. ಅನೇಕ ಪ್ರಕರಣಗಳಲ್ಲಿ ಆತ ಇದ್ದಾನೆ ಆದ್ರು ಕ್ರಮವಾಗಿಲ್ಲ. ಇದಕ್ಕೆ ಜಿಲ್ಲಾ ಮಂತ್ರಿ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ನಮ್ಮ ಜಿಲ್ಲೆಯಲ್ಲಿ ರೌಡಿಸಂ ಅನ್ನೋದು ಇರಲಿಲ್ಲ. ರಾಜಕೀಯದ ಸ್ವಾರ್ಥಕ್ಕೆ ರೌಡಿಗಳನ್ನ ಪ್ರೋತ್ಸಾಹಿಸುವುದು, ಜೊತೆಗೆ ಗನ್ ಮ್ಯಾನ್ ಹಾಕೊಂಡು ತಿರುಗಾಡೋದು. ಮಾಜಿ ಆದ್ರು ಗನ್ ಮ್ಯಾನ್ ಬೇಕು, ಹಾಲಿ ಯಾದ್ರು ಗನ್ ಮ್ಯಾನ್ ಬೇಕು. ನಮ್ಮ ಸಮಾಜ ಎಲ್ಲಿಗೆ ಹೋಗ್ತಿದೆ?
ಚಲುವರಾಯಸ್ವಾಮಿಗೆ ಏನು ಅನ್ಸಿದ್ಯೋ ಗೊತ್ತಿಲ್ಲ. ಇದನ್ನ ಉತ್ತಮ ಆಡಳಿತ ಅನ್ಕೊಂಡಿದ್ದಾರೇನೊ. ಇದನ್ನ ತೀವ್ರವಾಗಿ ಖಂಡಿಸುತ್ತೇನೆ. ರೌಡಿಗಳನ್ನ ಗಡಿಪಾರು ಮಾಡುವುದು ನಮ್ಮ ಎಂಎಲ್ ಎಗೆ ಗೊತ್ತಿಲ್ಲ. ಈ ವಿಚಾರದಲ್ಲಿ ರಮೇಶ್ ಬಾಬು ಬಂಡಿಸಿದ್ದೇಗೌಡ ವ್ಯಕ್ತಿತ್ವ ಅನಾವರಣ ಆಗುತ್ತೆ. ಉತ್ತಮ ಆಡಳಿಗಾರನ್ನ ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಈ ರೀತಿಯ ಘಟನೆಗಳು ನಡೆಯುತ್ತವೆ ಎಂದು ಹೇಳಿದರು.