ಮಂಡ್ಯ: ಸಾರ್ವಜನಿಕ ರಸ್ತೆ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಗ್ರಾಮದ ಎರಡೂ ಗುಂಪುಗಳಿಂದ ಶಾಸಕರ ಪರ-ವಿರುದ್ಧ ಪ್ರತಿಭಟನೆ ನಡೆಸಲಾಗಿದೆ.
ಮಂಡ್ಯ ತಾಲ್ಲೂಕಿನ ರಾಯಶೆಟ್ಟಿಪುರ ಗ್ರಾಮದ ಸಾರ್ವಜನಿಕ ರಸ್ತೆ ಬಂದ್ ಗೆ ಶಾಸಕ ಗಣಿಗ ರವಿಕುಮಾರ್ ಅವರಿಂದ ಕುಮ್ಮಕ್ಕು ಆರೋಪವಾಗಿ ನೆನ್ನೆ ಒಂದು ಗುಂಪು ಪ್ರತಿಭಟನೆ ನಡೆಸಿತ್ತು.
ಮಂಡ್ಯ ಡಿಸಿ ಕಚೇರಿ ಬಳಿ ಗ್ರಾಮಸ್ಥರಿಂದ ಇಂದು ಮತ್ತೊಂದು ಗುಂಪು ಪ್ರತಿಭಟನೆ ನಡೆಸಿದ್ದು, ಸರ್ಕಾರಿ ರಸ್ತೆ ಬಂದ್ ಮಾಡಿರುವುದನ್ನು ತೆರವು ಗೊಳಿಸಲು ಆಗ್ರಹಿಸಿದೆ.
ಸರ್ಕಾರಿ ನಕಾಶೆಯಲ್ಲಿರುವ ರಸ್ತೆಯ ಅಕ್ರಮ ತೆರವುಗೊಳಿಸುವಂತೆ ಇಂದು ಮತ್ತೊಂದು ಗುಂಪಿನಿಂದ ಪ್ರತಿಭಟನೆ ನಡೆಸಲಾಗಿದೆ.
ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ಸರ್ಕಾರಿ ಜಾಗ ಒತ್ತುವರಿಯಾಗಿದೆ ಅದನ್ನು ತೆರವು ಮಾಡಿ ರಸ್ತೆ ಮಾಡಲಿ. ವೆಂಕಟಗಿರಿಯಯ್ಯ ಗ್ರಾಮದಲ್ಲಿ ಅಶಾಂತಿ ಉಂಟು ಮಾಡಿ ದ್ವೇಷ ಬಿತ್ತುತ್ತಿದ್ದಾರೆ. ಗ್ರಾಮದ ಕೆಲವು ಮುಖಂಡರ ಮೇಲೆ ಸುಳ್ಳು ಕೇಸ್ ಹಾಕಿಸಿದ್ದಾರೆ. ತಕ್ಷಣವೇ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಯಶೆಟ್ಟಿಪುರ ಗ್ರಾಮದ ಮುಖಂಡರು ಡಿಸಿಗೆ ಮನವಿ ಸಲ್ಲಿಸಿದರು.