Wednesday, April 9, 2025
Google search engine

HomeUncategorizedರಾಷ್ಟ್ರೀಯಆರ್​ಬಿಐ ಗವರ್ನರ್ ಶಕ್ತಿಕಾಂತ್​ ದಾಸ್​ ಆರೋಗ್ಯದಲ್ಲಿ ಏರುಪೇರು; ಚೆನ್ನೈನ ಆಸ್ಪತ್ರೆಗೆ ದಾಖಲು

ಆರ್​ಬಿಐ ಗವರ್ನರ್ ಶಕ್ತಿಕಾಂತ್​ ದಾಸ್​ ಆರೋಗ್ಯದಲ್ಲಿ ಏರುಪೇರು; ಚೆನ್ನೈನ ಆಸ್ಪತ್ರೆಗೆ ದಾಖಲು

ಚೆನ್ನೈ: ಭಾರತೀಯ ರಿಸರ್ವ್​ ಬ್ಯಾಂಕ್​ನ ಗವರ್ನರ್ ಶಕ್ತಿಕಾಂತ್​ ದಾಸ್​ಗೆ ಅನಾರೋಗ್ಯ ಕಾಡಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶಕ್ತಿಕಾಂತ್ ದಾಸ್​ ಅವರಿಗೆ ಆ್ಯಸಿಡಿಟಿ ಸಮಸ್ಯೆ ಎದುರಾಗಿತ್ತು, ಅವರು ಆರೋಗ್ಯವಾಗಿದ್ದಾರೆ, ಮುಂದಿನ 2-3 ಗಂಟೆಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

1960 ರ ನಂತರ ಸುದೀರ್ಘ ಸೇವೆ ಸಲ್ಲಿಸಿದ RBI ಮುಖ್ಯಸ್ಥರೆಂಬ ಖ್ಯಾತಿ ಗಳಿಸಿದ್ದಾರೆ. ಅವರ ನಾಯಕತ್ವದಲ್ಲಿ, RBI ಹಣದುಬ್ಬರದ ಒತ್ತಡಗಳು ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ಸೇರಿದಂತೆ ವಿವಿಧ ಆರ್ಥಿಕ ಸವಾಲುಗಳನ್ನು ನ್ಯಾವಿಗೇಟ್ ಮಾಡಿದೆ.

ಶಕ್ತಿಕಾಂತ್​ ದಾಸ್​ ಅವರನ್ನು RBI ಗವರ್ನರ್‌ ಆಗಿ ಮೂರು ವರ್ಷದ ಅವಧಿಗೆ ಕೇಂದ್ರ ಸರ್ಕಾರ 2021ರಲ್ಲಿ ಮರು ನೇಮಕ ಮಾಡಿತ್ತು.

ಶಕ್ತಿಕಾಂತ್‌ ದಾಸ್‌ರವರನ್ನು ಡಿಸೆಂಬರ್ 10, 2021ರಿಂದ ಡಿಸೆಂಬರ್ 10,2024ರವರೆಗೆ ಮೂರು ವರ್ಷಗಳ ಅವಧಿಗೆ ನೇಮಿಸಲಾಗಿತ್ತು. ಶಕ್ತಿಕಾಂತ ದಾಸ್‌ರವರು 2018ರ ಡಿಸೆಂಬರ್‌ನಲ್ಲಿ RBI ಗವರ್ನರ್‌ ಆಗಿ ನೇಮಕಗೊಂಡಿದ್ದರು. ಇದೇ ಡಿಸೆಂಬರ್‌ಗೆ ಅವರ ಅಧಿಕಾರವಧಿ ಮುಕ್ತಾಯವಾಗಲಿದ್ದ ಹಿನ್ನೆಲೆಯಲ್ಲಿ ಅವರನ್ನು ಮರುನೇಮಕ ಮಾಡಲಾಗಿತ್ತು.

ಎನ್‌ಡಿಎ ಸರ್ಕಾರದಲ್ಲಿ ಎರಡನೇ ಬಾರಿಗೆ RBI ಗವರ್ನರ್‌ ಆಗಿ ನೇಮಕಗೊಂಡ ಮೊದಲ ವ್ಯಕ್ತಿ ಶಕ್ತಿಕಾಂತ ದಾಸ್ ಆಗಿದ್ದಾರೆ. ಈ ಮೊದಲಿದ್ದ ಗವರ್ನರ್​ ಊರ್ಜಿತ್ ಪಟೇಲ್‌ರವರು ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯದ ಕಾರಣಕ್ಕಾಗಿ ಈ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದಿದ್ದರು.

RELATED ARTICLES
- Advertisment -
Google search engine

Most Popular