Monday, April 14, 2025
Google search engine

HomeUncategorizedರಾಷ್ಟ್ರೀಯರೆಪೋ ದರ ಶೇ 6.25ರಿಂದ ಶೇ 6ಕ್ಕೆ ಇಳಿಸಿದ RBI

ರೆಪೋ ದರ ಶೇ 6.25ರಿಂದ ಶೇ 6ಕ್ಕೆ ಇಳಿಸಿದ RBI

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ರೆಪೋ ರೇಟ್ ಇಳಿಕೆ ಮಾಡಿದ್ದು, ರೆಪೋ ದರ ಶೇ 6.25ರಿಂದ ಶೇ 6ಕ್ಕೆ ಇಳಿಕೆಯಾಗಿದೆ.

ಇಂದು ಸುದ್ದಿಗೋಷ್ಠಿ ನಡೆಸಿದ ಆರ್​​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ಕುರಿತು ಮಾಹಿತಿ ನೀಡಿದರು. ರೆಪೋ ದರ 25 ಮೂಲಾಂಕಗಳಷ್ಟು ಕಡಿತಗೊಳಿಸಲಾಗಿದೆ. ಮೊನ್ನೆ ಮತ್ತು ನಿನ್ನೆ ನಡೆದ ಆರ್​​ಬಿಐ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದರಿಂದಾಗಿ ಗೃಹ ಸಾಲ ಸೇರಿ ಹಲವು ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗಲಿದೆ. ರೆಪೋ ದರ ಇಳಿಕೆಯಿಂದ ಇಎಂಐ ಕಡಿಮೆಯಾಗುವ ಸಾಧ್ಯತೆ ಇದೆ. ಫೆಬ್ರುವರಿಯಲ್ಲಿ ನಡೆದ ಎಂಪಿಸಿ ಸಭೆಯಲ್ಲೂ 25 ಮೂಲಾಂಕಗಳಷ್ಟು ಬಡ್ಡಿದರವನ್ನು ಇಳಿಸಲಾಗಿತ್ತು. ಈಗ ಮತ್ತೊಮ್ಮೆ ಕಡಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

RELATED ARTICLES
- Advertisment -
Google search engine

Most Popular