Sunday, May 31, 2026
Google search engine

Homeಕ್ರೀಡೆRCB vs GT ಫೈನಲ್ ಇಂದು: ಗೆದ್ದ ತಂಡ, ರನ್ನರ್-ಅಪ್ ಪ್ರಶಸ್ತಿ ಮೊತ್ತ ಎಷ್ಟು ಗೊತ್ತಾ?

RCB vs GT ಫೈನಲ್ ಇಂದು: ಗೆದ್ದ ತಂಡ, ರನ್ನರ್-ಅಪ್ ಪ್ರಶಸ್ತಿ ಮೊತ್ತ ಎಷ್ಟು ಗೊತ್ತಾ?

ನವದೆಹಲಿ : ಐಪಿಎಲ್ 2026ರ ಫೈನಲ್ ಪಂದ್ಯವು ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದೆ. ಶುಭಮನ್ ಗಿಲ್ ನಾಯಕರಾಗಿ ತಮ್ಮ ಚೊಚ್ಚಲ ಟ್ರೋಫಿ ಗೆಲ್ಲುವ ತವಕದಲ್ಲಿದ್ದಾರೆ. ಜಿಟಿ ತಂಡವು 2022 ರಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ತನ್ನ ಮೊದಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಇತ್ತ ರಜತ್ ಪಾಟೀದಾರ್ ನಾಯಕತ್ವದಲ್ಲಿ ಆರ್‌ಸಿಬಿ ಕಳೆದ ವರ್ಷ (2025) ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ಇದೀಗ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಹಾಗಾದರೆ ಚಾಂಪಿಯನ್ ತಂಡ ಹಾಗೂ ರನ್ನರ್-ಅಪ್ ತಂಡಕ್ಕೆ ಸಿಗಲಿರುವ ಬಹುಮಾನದ ಮೊತ್ತ ಎಷ್ಟು? ಇಲ್ಲಿದೆ ವಿವರ.

ತಂಡದ ಸಂಯೋಜನೆಯನ್ನು ನೋಡುವುದಾದರೆ, ಫಿಲ್ ಸಾಲ್ಟ್ ಆಡುವ ಬಗ್ಗೆ ಇನ್ನೂ ಸಂದೇಹವಿದ್ದರೂ, ಆರ್‌ಸಿಬಿ ತನ್ನ ಗೆಲುವಿನ ಕಾಂಬಿನೇಷನ್ ಅನ್ನು ಬದಲಾಯಿಸದೆ ಕಣಕ್ಕಿಳಿಯಬಹುದು. ವಿರಾಟ್ ಕೊಹ್ಲಿ ಜೊತೆಗೆ ವೆಂಕಟೇಶ್ ಅಯ್ಯರ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಗುಜರಾತ್ ಟೈಟಾನ್ಸ್ ತಂಡದ ಪ್ಲೇಯಿಂಗ್ 11 ನಲ್ಲೂ ಬದಲಾವಣೆಯ ಸಾಧ್ಯತೆ ತೀರಾ ಕಡಿಮೆ ಇದೆ. ಉಭಯ ತಂಡಗಳು ಇಂದು ತಮ್ಮ ಎರಡನೇ ಪ್ರಶಸ್ತಿಗಾಗಿ ಮೈದಾನಕ್ಕಿಳಿಯುತ್ತಿದ್ದು, ಯಾರ ಕನಸು ನನಸಾಗಲಿದೆ ಎಂದು ಕಾದು ನೋಡಬೇಕಿದೆ.

IPL 2026 ವಿನ್ನರ್ ಮತ್ತು ರನ್ನರ್-ಅಪ್ ಬಹುಮಾನದ ಮೊತ್ತ

ವಿಜೇತ ತಂಡ : ಐಪಿಎಲ್‌ ನ ಮೊದಲ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಚಾಂಪಿಯನ್ ಆದಾಗ 4.8 ಕೋಟಿ ರೂ. ಸಿಕ್ಕಿತ್ತು. ಆದರೆ ಇಂದು ಬಹುಮಾನದ ಮೊತ್ತ 5 ಪಟ್ಟು ಹೆಚ್ಚಾಗಿದೆ. ಐಪಿಎಲ್ 2026 ರ ಪ್ರಶಸ್ತಿ ಗೆಲ್ಲುವ ತಂಡಕ್ಕೆ ಬರೋಬ್ಬರಿ 20 ಕೋಟಿ ರೂಪಾಯಿ ಬಹುಮಾನ ಸಿಗಲಿದೆ.

ರನ್ನರ್-ಅಪ್ ತಂಡ : ಫೈನಲ್‌ನಲ್ಲಿ ಸೋಲುವ ತಂಡಕ್ಕೂ ಕೋಟಿ ಕೋಟಿ ಹಣ ಸಿಗಲಿದೆ. ರನ್ನರ್ ಅಪ್ ತಂಡಕ್ಕೆ 13 ಕೋಟಿ ರೂಪಾಯಿ ಬಹುಮಾನದ ಮೊತ್ತ ನಿಗದಿಯಾಗಿದೆ.

ಪ್ಲೇಆಫ್ ತಲುಪಿದ ಇತರ ತಂಡಗಳಿಗೆ ಸಿಗುವ ಮೊತ್ತ

ಪ್ಲೇಆಫ್ ತಲುಪಿದ ಉಳಿದ ಎರಡು ತಂಡಗಳಿಗೂ ಪ್ರಶಸ್ತಿ ಮೊತ್ತ ಸಿಗಲಿದೆ. ಕ್ವಾಲಿಫೈಯರ್-2 ರವರೆಗೆ ತಲುಪಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 7 ಕೋಟಿ ರೂಪಾಯಿ ಹಾಗೂ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಹೊರಬಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 6.5 ಕೋಟಿ ರೂಪಾಯಿ ಲಭಿಸಲಿದೆ.

RCB vs GT ಲೈವ್ ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯವು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದೇ ಪಿಚ್‌ನಲ್ಲಿ ಈ ಸೀಸನ್‌ನಲ್ಲಿ ಆರ್‌ಸಿಬಿ ಮತ್ತು ಜಿಟಿ ಮುಖಾಮುಖಿಯಾಗಿದ್ದಾಗ ಕಡಿಮೆ ಸ್ಕೋರಿಂಗ್ ಪಂದ್ಯ ಕಂಡುಬಂದಿತ್ತು.

ಪಂದ್ಯದ ಸಮಯ: ಇಂದು ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದ್ದು, 7 ಗಂಟೆಗೆ ಟಾಸ್ ನಡೆಯಲಿದೆ.

ನೇರ ಪ್ರಸಾರ (Live ಟಿವಿ): ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ (Star Sports Network) ಚಾನೆಲ್‌ಗಳಲ್ಲಿ.

ಲೈವ್ ಸ್ಟ್ರೀಮಿಂಗ್ (Digital): ಜಿಯೋಹಾಟ್‌ಸ್ಟಾರ್ (JioHotstar) ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular