ಹುಣಸೂರು: ಹುಣಸೂರಿನ ಪ್ರಸಿದ್ದ ಆರ್.ಸಿ.ಎನ್. ಚಾನಲ್ ಮಾಲಿಕ ವಿ.ಪಿ.ಸಾಯಿನಾಥ್ ಅವರ 75 ವರ್ಷದ ಸಂಭ್ರಮ ಮಹೋತ್ಸವ ಆಚರಣೆಯನ್ನು ಭಾನುವಾರ ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಅದ್ದೂರಿಯಾಗಿ ಅವರ ಅಭಿಮಾನಿ ವರ್ಗ ಹಮ್ಮಿಕೊಂಡಿರುವುದು ಶ್ಲಾಘನೀಯ
ಆರ್.ಸಿ. ಎನ್. ಚಾನಲ್ ಶುರುವಾಗಿ 25 ವರ್ಷದ ರಜತ ಸಂಭ್ರಮದ ಘಳಿಗೆಯಲ್ಲೆ ಅದರ ಮಾಲಿಕರಾದ ವಿ.ಪಿ.ಸಾಯಿನಾಥ್ ತಮ್ಮ 75 ವಸಂತಗಳನ್ನು ಪೂರೈಸಿ ಹುಣಸೂರು ಜನತೆಗೆ ನೈಜ ಸುದ್ದಿಗಳ ಜತೆಗೆ. ಮನೆ,ಮನೆಗೆ ಮನೋರಂಜನೆ ನೀಡಿ ಪ್ರಖ್ಯಾತರಾಗಿರುವುದು ಹೆಮ್ಮೆಯ ವಿಷಯವಾಗಿದೆ.
ಭಾನುವಾರ ಬೆಳಿಗ್ಗೆ 11 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಶುರುವಾಗುವ ಕಾರ್ಯಕ್ರಮ. ಸಂಜೆ ಮುನೇಶ್ವರ ಕಾವಲ್ ಮೈದಾನದಲ್ಲಿ ಬೃಹತ್ ವೇದಿಕೆಯಲ್ಲಿ ಜನರಿಗೆ ಮನರಂಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದರಲ್ಲಿ ತಾಲೂಕಿನ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.