Tuesday, December 2, 2025
Google search engine

Homeರಾಜ್ಯಸುದ್ದಿಜಾಲRCU ರಾದ್ಧಾಂತ-ಆರೋಪ ಹೊತ್ತ ಪ್ರೊಫೆಸರ್ ಪರ ನಿಂತರಾ ವಿಸಿ?

RCU ರಾದ್ಧಾಂತ-ಆರೋಪ ಹೊತ್ತ ಪ್ರೊಫೆಸರ್ ಪರ ನಿಂತರಾ ವಿಸಿ?

ವರದಿ :ಸ್ಟೀಫನ್ ಜೇಮ್ಸ್.

ರಾಜ್ಯಪಾಲರು ಅನುಮತಿಸಿದರೂ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರ ನೀಡದ RCU!

ಸಿಂಡಿಕೆಟ್ ಗಮನಕ್ಕೂ ತಾರದೇ ಮುಚ್ಚಿಟ್ಟವರು ಯಾರು?

ಬೆಳಗಾವಿ:
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಮತ್ತೆ ಗರ್ಭಗಟ್ಟಿದ ಗೊಂದಲ. ವಿಸಿ ಸ್ವತಃ ಆರೋಪ ಹೊತ್ತ ಪ್ರೊಫೆಸರ್ ವಿರುದ್ಧ ವಿಚಾರಣೆ ಪ್ರಾರಂಭಿಸಿದ ಸಂದರ್ಭದಲ್ಲಿ, ಅನಿರೀಕ್ಷಿತವಾಗಿ ಅದೇ ಪ್ರೊಫೆಸರ್ ಪರವಾಗಿ ನಿಂತಂತೆ ಕಾಣುವ ವರ್ತನೆ ಕ್ಯಾಂಪಸ್ನಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ವಿದ್ಯಾರ್ಥಿ ವಲಯ, ಶಿಕ್ಷಕ ವಲಯ ಮತ್ತು ಸಿಬ್ಬಂದಿ ವಲಯದಲ್ಲಿ ಉಲ್ಬಣಿಸಿದ ಪ್ರಶ್ನೆ ಏನೆಂದರೆ, ವಿವಾದದ ಕೇಂದ್ರದಲ್ಲಿರುವ ಪ್ರೊಫೆಸರ್ ಮೇಲೆ ಆರೋಪ ಗಂಭೀರವಾಗಿದ್ದರೆ, ವಿಸಿ ಏಕೆ ರಕ್ಷಣಾ ಬಲೆಯಂತಾಗುತ್ತಿದ್ದಾರೆ? ಸಿಂಡಿಕೆಟ್ ಮೌನ: ರಕ್ಷಣೆಯೇ? ಎಂಬ ಅನುಮಾನ ಎಲ್ಲರನ್ನು ಕಾಡುತ್ತಿದೆ. ವಿಶ್ವವಿದ್ಯಾಲಯದ ಆಡಳಿತದ ಅತಿ ಶಕ್ತಿಶಾಲಿ ಸಂಸ್ಥೆಯಾದ ಸಿಂಡಿಕೆಟ್, ಪ್ರಕರಣದ ಬಗ್ಗೆ ತೀವ್ರ ಚರ್ಚ ನಡೆಯಬೇಕಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ಬರದಿರುವುದು ಇನ್ನಷ್ಟು ಸಂಶಯ ಸೃಷ್ಟಿಸಿದೆ.
ಮತ್ತೊಂದು ಸಂಗತಿ ಎಂದರೆ, ಮಾಧ್ಯಮದಲ್ಲಿ ವರದಿಗಳು ಪ್ರಕಟವಾದ ನಂತರ ಎಚ್ಚೆತ್ತ ವಿಸಿಯವರು ಸಿಂಡಿಕೇಟ್ ಗಮನಕ್ಕೆ ತಂದರು ಎನ್ನುವ ಮಾತುಗಳು ಸ್ಪಷ್ಟವಾಗಿ ಕೇಳಿ ಬರುತ್ತಿವೆ. ಅಷ್ಟೆ ಅಲ್ಲ ಸಿಂಡಿಕೇಟ್ ಸದಸ್ಯರೇ ಇದನ್ನು ಸ್ಪಷ್ಟಪಡಿಸಿದ್ದಾರೆ.
ಆದರೆ ಸಿಂಡಿಕೆಟ್ ದವರೇ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರ ಕೊಡುವುದನ್ನು ತಡೆಹಿಡಿದಿದ್ದಾರೆ ಎನ್ನುವ ವಿವಿಯವರ ಮಾತು ಅನೇಕ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ.

ವಿಸಿಯ ನಡೆ ವಿವಾದಕ್ಕೆ ಕಾರಣ
ವಿಸಿ ಪ್ರಾರಂಭದಲ್ಲಿ ಆರೋಪಗಳ ಕುರಿತು ತನಿಖೆಗೆ ಅನುಮತಿ ನೀಡಿದರೂ, ನಂತರ ಆರೋಪಿತ ಪ್ರೊಫೆಸರ್ ಪರವಾಗಿ ಮಾತನಾಡಿದಂತೆ ಕಾಣುವ ಹೇಳಿಕೆಗಳು ಹಲವು ವಿದ್ಯಾಥರ್ಿರ್ ಸಂಘಟನೆಗಳನ್ನು ಸಿಟ್ಟಿಗೆದ್ದಿವೆ.

ವಿಶ್ವವಿದ್ಯಾಲಯದ ಸ್ವಚ್ಚತೆ, ಪಾರದರ್ಶಕತೆ ಪ್ರಶ್ನೆ
ಒಬ್ಬ ಆರೋಪಿತ ಪ್ರೊಫೆಸರ್ ವಿಚಾರದಲ್ಲಿ ವಿಸಿಯವರಂತಹವರ ನಿಲುವು ವಿಶ್ವವಿದ್ಯಾಲಯದ ಆಡಳಿತದ ನೈತಿಕತೆಯನ್ನು ಪ್ರಶ್ನೆಗೊಳಿಸಿದೆ. ಕುಲಪತಿ
ಸ್ಥಾನದ ಮಾನ-ಗೌರವವೇ ಪ್ರಶ್ನೆಗೊಳಗಾಗಿದೆ ಎಂದು ಕೆಲ ಪ್ರಾಧ್ಯಾಪಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಈ ವಿಷಯ ರಾಜ್ಯ ಶಿಕ್ಷಣ ಇಲಾಖೆಗೂ ತಲುಪಿದೆಯೆಂಬ ಸುಳಿವುಗಳಿವೆ.
ಸಿಂಡಿಕೆಟ್ಟ ಸೈಲೆನ್ಸ್ ಮತ್ತು ವಿಸಿಯ ಸಪೋಟಟರ್ ಟೋನ್ ಈಗ ದೊಡ್ಡ ವಿವಾದದ ರೂಪ ಪಡೆಯುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಏನಿದು ಪ್ರಕರಣ?
ಐತಿಹಾಸಿಕ ಪ್ರಸಿದ್ಧ ಕಿತ್ತೂರು ರಾಣಿ ಚನ್ನಮ್ಮಳ ಹೆಸರನ್ನು ಹೊಂದಿದ ವಿಶ್ವವಿದ್ಯಾಲಯವು ನಾಡು-ನುಡಿ ಸಾಹಿತ್ಯಕ ಗರಿಮೆಯಾಗಿದೆ. ಇಂತಹ ಜ್ಞಾನ ದೇಗುಲದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಘಟನೆಯೊಂದು ಅದೇ ವಿವಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಉತ್ತರ ಕರ್ನಾಟಕ ಭಾಗದ ಶಿಕ್ಷಣ ಕೇಂದ್ರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಇದೀಗ ಅಕ್ರಮ ಮತ್ತು ಅಧಿಕಾರ ದುರುಪಯೋಗದ ವಾಸನೆ ಕೇಳಿ ಬಂದಿದೆ.
ಇದರಲ್ಲಿ ರಾಣಿ ಚನ್ನಮ್ಮ ವಿವಿಯ ಕುಲಪತಿ ಸೇರಿದಂತೆ ರಿಜಿಸ್ಟ್ರಾರ್ ಅವರು ಬೀಸೋ ದೊಣ್ಣೆಯಿಂದ ಪಾರಾಗುವ ಕೆಲಸ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಅಷ್ಟೇ ಅಲ್ಲ ಎಲ್ಲಕ್ಕೂ ಸಿಂಡಿಕೇಟ್ ದ್ದೆ ಅಂತಿಮ ತೀರ್ಮಾನ ಎನ್ನುವ ಸಬೂಬು ಕೂಡ ಹೇಳುತ್ತಿದ್ದಾರೆ.
ರಾಚವಿ ವಿದ್ಯಾರ್ಥಿನಿ ಸುಜಾತಾ ಎಂಬುವರು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದು ಇದಕ್ಕೆ ತಾಜಾ ಉದಾಹರಣೆ
ಇಲ್ಲಿ ಮತ್ತೊಂದು ಆಘಾತಕಾರಿ ಸಂಗತಿ ಎಂದರೆ, ಕಳೆದ ಹಲವು ವರ್ಷಗಳಿಂದ ಆರೋಪ ಹೊತ್ತಿರುವ ಮೂರ್ತಿ ಅವರ ರಕ್ಷಣೆಗೆ ಖುದ್ದು ವಿಸಿ ಮತ್ತು ರಿಜಿಸ್ಟರ್ ಅವರು ನಿಂತಿದ್ದರು ಎನ್ನುವ ದೂರು ಸಹ ವಿವಿ ಆವರಣದಲ್ಲಿ ಕೇಳಿ ಬರುತ್ತಿದೆ. ಇದರ ಜೊತೆಗೆ ಇದನ್ನು ಸಿಂಡಿಕೇಟ್ ಗಮನಕ್ಕೂ ತರುವಲ್ಲಿ ಅನಗತ್ಯ ವಿಳಂಣಬ ನೀತಿಯನ್ನು ಅನುಸರಿಸಿದರು ಎನ್ನುವ ಆರೋಪ ಸಹ ಕೇಳಿ ಬರುತ್ತಿರುವ ಮೂರ್ತಿ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಈಗ ಸಾಕಷ್ಟು ಅಕ್ರಮಗಳು ನಡೆಯುತ್ತಿವೆ ಎಂದು ಆತ್ಮಹತ್ಯೆಗೆ ಯತ್ನಿಸಿರುವ ರಾಣಿ ಚೆನ್ನಮ್ಮ ಪಿಎಚ್ ಡಿ ವಿದ್ಯಾಥಿ‌ರ್‌ ಸುಜಾತಾ ಎಂಬುವರು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಸದ್ಯ ಇವರಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಇವರು ನೀಡಿರುವ ಈ ಹೇಳಿಕೆ ತೀವ್ರ ಸ್ವರೂಪ ಪಡೆದುಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಲಾರಂಭಿಸಿವೆ.

ಘಟನೆ ಹಿನ್ನಲೆ

ಇತ್ತೀಚೆಗೆ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್‌ಸಿಯು)ದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲು ನಿರಾಕರಿಸಿದ್ದಕ್ಕೆ 34 ವರ್ಷದ ಪಿಎಚ್ ಡಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಯನ್ನು ಚಿಕ್ಕೋಡಿ ನಿವಾಸಿ ಸುಜಾತಾ ಪೋಳ ಎಂದು ಗುರುತಿಸಲಾಗಿದ್ದು, ನಿದ್ದೆ ಮಾತ್ರೆಗಳನ್ನು‌ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಬಳಿಕ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ.

ಸುಜಾತಾ ಪೋಳ ಅವರು ರಾಯಬಾಗ ಪ್ರದೇಶದ ಸಮಗ್ರ ಚಾರಿತ್ರಿಕ ವಿಷಯದಲ್ಲಿ ತಮ್ಮ ಸಂಶೋಧನೆ ಪೂರ್ಣಗೊಳಿಸಿ ಆರು ತಿಂಗಳ ಹಿಂದೆಯೇ ಪ್ರಬಂಧ ಸಲ್ಲಿಸಿದ್ದರು. ಈ ಬಾರಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಅವರಿಗೆ ಪಿಎಚ್‌ಡಿ ಪ್ರದಾನ ಮಾಡುವ ನಿರೀಕ್ಷೆ ಇತ್ತು, ಆದರೆ, ಅವರಿಗೆ ಪದವಿ ನೀಡಲಿಲ್ಲ. ಅವರಿಗೆ ಅನಗತ್ಯವಾಗಿ ಟಾರ್ಗೆಟ್ ಮಾಡಿ ಪಿಎಚ್ ಡಿ.ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.

RELATED ARTICLES
- Advertisment -
Google search engine

Most Popular