Sunday, April 20, 2025
Google search engine

Homeಅಪರಾಧಕಾನೂನುಆರ್.ಡಿ. ಪಾಟೀಲ್ ಬಂಧಿಸುವಲ್ಲಿ ಕರ್ತವ್ಯ ಲೋಪ ಆರೋಪ: ಸಿಪಿಐ ಸಾಗರ್ ಅಮಾನತು

ಆರ್.ಡಿ. ಪಾಟೀಲ್ ಬಂಧಿಸುವಲ್ಲಿ ಕರ್ತವ್ಯ ಲೋಪ ಆರೋಪ: ಸಿಪಿಐ ಸಾಗರ್ ಅಮಾನತು

ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮ ರೂವಾರಿ ಎನ್ನಲಾಗುತ್ತಿರುವ ಆರ್.ಡಿ. ಪಾಟೀಲ್, ವಾರ್ದ ಅಪಾರ್ಟ್ಮೆಂಟ್ ನಿಂದ ತಪ್ಪಿಸಿಕೊಳ್ಳುವಲ್ಲಿ ಉಂಟಾಗಿರುವ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಿಪಿಐ ಸಾಗರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಈ ಆದೇಶವನ್ನು ಕಲ್ಬುರ್ಗಿ ಈಶಾನ್ಯ ವಲಯದ ಐಜಿಪಿ ಹೊರಡಿಸಿದ್ದಾರೆ ಕಲ್ಬುರ್ಗಿ ನಗರದ ವಾರ್ದಾ ಅಪಾರ್ಟ್ಮೆಂಟಿನಲ್ಲಿ ಆರ್ ಡಿ ಪಾಟೀಲ್ ಇರುವ ಮಾಹಿತಿ ಅಫ್ಜಲ್ಪುರ್ ಠಾಣೆಯ ಸಿಪಿಐ ಪಂಡಿತ್ ಸಾಗರ್ ಅವರಿಗೆ ತಲುಪಿತ್ತು. ಆದರೆ, ಅವರು ತಡವಾಗಿ ಅಪಾರ್ಟ್ಮೆಂಟ್ ಗೆ ಹೋದರು. ಇದರಿಂದಾಗಿ ಆರೋಪಿತ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ ಎನ್ನುವ ಗುರುತರವಾದ ಆರೋಪವನ್ನು ಎದುರಿಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿರುವ ಸಾಗರ್ ಅವರನ್ನು ಅಮಾನತ್ತು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular