ಬಾಗಲಕೋಟೆ: ಬಾಗಲಕೋಟೆಯ ಪ್ರತಿಷ್ಠಿತ ಶ್ರೀ ಶಿವಶಕ್ತಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ಬನಹಟ್ಟಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರಾಗಿ ಶ್ರೀಯುತ ಮಲ್ಲಿಕಾರ್ಜುನ ಜಯವಂತಪ್ಪ ಬಾಣಕಾರ ಪುನರಾಯ್ಕೆಯಾಗಿದ್ದಾರೆ.
ಅವರು ಬನಹಟ್ಟಿ ಶಾಖೆಯಲ್ಲಿ ನಡೆದ ಸಭೆಯಲ್ಲಿ ಸಲಹಾ ಸಮಿತಿ ಸದಸ್ಯರು ಸನ್ಮಾನ ಸ್ವೀಕರಿಸಿ ಮಾಧ್ಯಮ ಮಿತ್ರರರೊಂದಿಗೆ ಮಾತನಾಡಿ, ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿದಾಗ ಜನರ ಪ್ರೀತಿ ವಿಶ್ವಾಸ ಗಳಿಸುವದು ಬಹಳ ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಲಹಾ ಸಮಿತಿ ಸದಸ್ಯರಾದ ಸುರೇಶ ಬರಗಡಗಿ.ರಮೇಶ ಬಾಣಕಾರ.ಈರಣ್ಣ ಹೊನವಾಡ.ಶಾಖಾ ವ್ಯವಸ್ಥಾಪಕ ರವೀಂದ್ರ ಮಂಡಿ ಇನ್ನೂ ಅನೇಕರು ಉಪಸ್ಥಿತರಿದ್ದರು.