Monday, April 21, 2025
Google search engine

Homeರಾಜ್ಯಇಂದು ಮಣಿಪುರದ ೧೧ ಬೂತ್‌ಗಳಲ್ಲಿ ಮರು ಮತದಾನ

ಇಂದು ಮಣಿಪುರದ ೧೧ ಬೂತ್‌ಗಳಲ್ಲಿ ಮರು ಮತದಾನ

ಇಂಫಾಲ: ಈಶಾನ್ಯ ರಾಜ್ಯದ ಮಣಿಪುರ ಸಂಸದೀಯ ಕ್ಷೇತ್ರದ ೧೧ ಮತಗಟ್ಟೆಗಳಲ್ಲಿ ಇಂದು ಸೋಮವಾರ ಮರು ಮತದಾನ ಆರಂಭವಾಗಿದೆ.

ಶುಕ್ರವಾರ ನಡೆದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಕೆಲವು ಕಿಡಿಗೇಡಿಗಳು ಈ ಮತಗಟ್ಟೆಗಳಲ್ಲಿ ಗುಂಡಿನ ದಾಳಿ ನಡೆಸಿ ಇವಿಎಂಗಳನ್ನು ಧ್ವಂಸಗೊಳಿಸಿದ್ದರು. ಬಳಿಕ ಚುನಾವಣಾ ಆಯೋಗವು ಮರು ಮತದಾನಕ್ಕೆ ಆದೇಶಿಸಿತ್ತು. ಅದರಂತೆ ಇಂದು ಮತದಾನ ನಡೆಯುತ್ತಿದೆ. ಯಾವುದೇ ಅವಘಡ ಸಂಭವಿಸದಂತೆ ಎಲ್ಲಾ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಸಂಬಂಧ ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿ, ಮರು ಮತದಾನ ನಡೆಯುತ್ತಿದ್ದು, ನಾವೆಲ್ಲ ಮತದಾನ ಮಾಡಲು ಬಂದಿದ್ದೇವೆ. ಇಂದು ಇಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.

ಸಂಘರ್ಷ ಪೀಡಿತ ಮಣಿಪುರದ ಕೆಲವು ಮತಗಟ್ಟೆಗಳಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಇವಿಎಂಗಳನ್ನು ಧ್ವಂಸಗೊಳಿಸಿರುವ ಘಟನೆಗಳು ವರದಿಯಾಗಿದ್ದವು. ಈ ನಡುವೆಯೂ ಶುಕ್ರವಾರ ಸಂಜೆ ೭ ಗಂಟೆಯವರೆಗೆ ಮಣಿಪುರದಲ್ಲಿ ಶೇ.೬೯.೧೮ರಷ್ಟು ಮತದಾನವಾಗಿತ್ತು.

RELATED ARTICLES
- Advertisment -
Google search engine

Most Popular