Monday, April 21, 2025
Google search engine

HomeUncategorizedರಾಷ್ಟ್ರೀಯಪೊಲೀಸ್ ವಾಹನ ಬಳಸಿ ರೀಲ್ಸ್: ಯುವಕನ ಬಂಧನ

ಪೊಲೀಸ್ ವಾಹನ ಬಳಸಿ ರೀಲ್ಸ್: ಯುವಕನ ಬಂಧನ

ಲಕ್ನೋ: ಉತ್ತರ ಪ್ರದೇಶದ ಗಾಜಿಯಾಬಾದ್‌ ನಲ್ಲಿ ಪೊಲೀಸ್‌ ವಾಹನವನ್ನು ಬಳಸಿಕೊಂಡು ಇನ್ಸ್ಟಾಗ್ರಾಮ್‌ ರೀಲ್ಸ್‌ ಮಾಡಿದ ಯುವಕನೊಬ್ಬ ಪೊಲೀಸರು ಬಂಧಿಸಿದ್ದಾರೆ.

ಇಂದಿರಾಪುರಂ ಪ್ರದೇಶದಲ್ಲಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ನಿರತರಾಗಿದ್ದಾಗ ಮೊಯಿನ್ ಖಾನ್ ಎಂಬಾತ ಖಾಲಿಯಿದ್ದ ಪೊಲೀಸ್‌ ವಾಹನವನ್ನು ಬಳಸಿಕೊಂಡು ಅದರಲ್ಲಿ ಕೂತು ಸ್ಟೈಲಿಸ್ಟ್‌  ಆಗಿ ರೀಲ್ಸ್‌ ಮಾಡಿದ್ದಾನೆ.

ಪೊಲೀಸ್‌ ವಾಹನದ ಸೀಟಿನಿಂದ ಕೆಳಗಿಳಿದು, ಕೋಲ್ಡ್‌ ಡ್ರಿಂಕ್‌ ಕುಡಿಯುತ್ತಾ ಬರುವ ದೃಶ್ಯಕ್ಕೆ ಮ್ಯೂಸಿಕ್‌ ವೊಂದನ್ನು ಹಾಕಿ ರೀಲ್ಸ್‌ ಮಾಡಿ ಫೆ.15 ರಂದು ಇನ್ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋ ವೇಗದಲ್ಲಿ ವೈರಲ್‌ ಆಗಿದೆ.

ಇಂದಿರಾಪುರಂನ ಕಣವಾಣಿ ಸೇತುವೆಯ ಬಳಿ ಟ್ರಾಫಿಕ್ ಜಾಮ್ ತೆರವುಗೊಳಿಸಲು ತೊಡಗಿದ್ದಾಗ, ಖಾಲಿ ಪೊಲೀಸ್ ವಾಹನವನ್ನು ಗಮನಿಸಿದ ಯುವಕ ಅದನ್ನು ಬಳಸಿ ರೀಲ್ ಮಾಡಿದ್ದಾರೆ. ವಿಡಿಯೋ ವೈರಲ್‌ ಆಗಿ ನಮ್ಮ ಗಮನಕ್ಕೆ ಬಂದ ಬಳಿಕ ಯುವಕನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular