Monday, April 21, 2025
Google search engine

Homeರಾಜ್ಯಸುದ್ದಿಜಾಲನಿರಂತರವಾಗಿ ಯೋಗಾಭ್ಯಾಸ ಮಾಡಿದರೆ ಆರೋಗ್ಯ ವೃದ್ದಿಯಾಗುವುದರ ಜತೆಗೆ ಮಾನಸಿಕ ಒತ್ತಡವು ಕಡಿಮೆಯಾಗಲಿದೆ: ಶಾಸಕ ಡಿ. ರವಿಶಂಕರ್

ನಿರಂತರವಾಗಿ ಯೋಗಾಭ್ಯಾಸ ಮಾಡಿದರೆ ಆರೋಗ್ಯ ವೃದ್ದಿಯಾಗುವುದರ ಜತೆಗೆ ಮಾನಸಿಕ ಒತ್ತಡವು ಕಡಿಮೆಯಾಗಲಿದೆ: ಶಾಸಕ ಡಿ. ರವಿಶಂಕರ್


ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ನಿರಂತರವಾಗಿ ನಿಯಮಿತ ಸಮಯದಲ್ಲಿ ಯೋಗಾಭ್ಯಾಸ ಮಾಡಿದರೆ ಆರೋಗ್ಯ ವೃದ್ದಿಯಾಗುವುದರ ಜತೆಗೆ ಮಾನಸಿಕ ಒತ್ತಡವು ಕಡಿಮೆಯಾಗಲಿದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.

ಪಟ್ಟಣದ ಕೃಷ್ಣರಾಜೇಂದ್ರ ಕ್ರೀಡಾಂಗಣದಲ್ಲಿ ಶನಿವಾರ ಬೆಳಿಗ್ಗೆ ಸುಮುಖ ಯೋಗ ಕೇಂದ್ರದ ವತಿಯಿಂದ ನಡೆದ. ಹನುಮಾಸನ ಮಕ್ಕಳ ಗ್ಲೋಬಲ್ ಯೋಗ ರೆಕಾರ್ಡ್ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಆಧುನಿಕ ಯುಗದಲ್ಲಿ ಯಾಂತ್ರಿಕ ಬದುಕು ನಡೆಸುತ್ತಿರುವ ನಮಗೆ ಪ್ರಸ್ತುತ ಯೋಗದ ಅವಶ್ಯಕತೆ ಇದೆ ಎಂದರು.

ಅಗತ್ಯ ತರಬೇತಿ ಪಡೆದು ಮನೆಯಲ್ಲಿಯೇ ಯೋಗ ಮಾಡಿ ಎಂದು ಸಲಹೆ ನೀಡಿದ ಶಾಸಕರು ದೇಶದ ಯೋಗ ಇಂದು ವಿಶ್ವದಲ್ಲಿಯೇ ಜನ ಮನ್ನಣೆ ಗಳಿಸಿದ್ದು ಪ್ರತಿಯೊಬ್ಬರೂ ಯೋಗ ಕಲಿತು ಅದರ ಯೋಗ್ಯತೆಯನ್ನು ಇತರರಿಗೂ ಸಾರಬೇಕೆಂದರು.

ಜೂನ್ ೨೧ನೇ ದಿನಾಂಕವನ್ನು ವಿಶ್ವ ಯೋಗ ದಿನಾಚರಣೆ ಎಂದು ಆಚರಿಸುತ್ತಿದ್ದು ಇದನ್ನು ಜಗತ್ತೇ ಒಪ್ಪಿ ಅಪ್ಪಿಕೊಂಡಿರುವುದು ಯೋಗದ ಮಹತ್ವವನ್ನು ತಿಳಿಸುತ್ತದೆ ಎಂದ ಡಿ.ರವಿಶಂಕರ್ ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಯೋಗ ತರಬೇತಿ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ನುಡಿದರು.

೧೧೦೧ ಮಕ್ಕಳಿಂದ ಏಕಕಾಲಕ್ಕೆ ಹನುಮಾಸನದ ಮೂಲಕ ಮಕ್ಕಳ ಗ್ಲೋಬಲ್ ಯೋಗ ರೆಕಾರ್ಡ್ ಕಾರ್ಯಕ್ರಮ ಮಾಡಿರುವುದು ಎಲ್ಲರೂ ಹೆಮ್ಮೆಪಡುವ ವಿಚಾರ ಎಂದರಲ್ಲದೆ ಇಂತಹ ಕಾರ್ಯಕ್ರಮದ ಮೂಲಕ ಅಭೂತಪೂರ್ವ ಸಾಧನೆ ಮಾಡಿರುವವರು ಅಭಿನಂದನೆಗೆ ಅರ್ಹರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಬೆಂಗಳೂರಿನ ಪತಂಜಲಿ ಯೋಗ ಟ್ರಸ್ಟ್ ಅಧ್ಯಕ್ಷ ಡಾ. ಪ್ರಕಾಶ್ ಗುರೂಜಿ ಮಾತನಾಡಿ ಯೋಗ ಚೈತನ್ಯದ ಚಿಲುಮೆಯಾಗಿದ್ದು ಇದನ್ನು ನಿತ್ಯ ಅಭ್ಯಾಸ ಮಾಡಿದರೆ ರೋಗ ಮುಕ್ತರಾಗಿ ಜೀವನ ಪೂರ್ತಿ ಬದುಕಬಹುದು ಎಂದು ತಿಳಿಸಿದರು.

ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಟ್ರಸ್ಟ್ ನ ಮುಖ್ಯಸ್ಥ ಡಾ. ದೇವರಾಜ ಯೋಗಿ ಗುರೂಜಿ, ಕೆ ಆರ್ ನಗರ ಪತಂಜಲಿ ಯೋಗ ಟ್ರಸ್ಟ್ ಅಧ್ಯಕ್ಷ ಪಿ. ಆರ್. ವಿಶ್ವನಾಥಶೆಟ್ಟಿ, ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ. ಎನ್ ಬಸಂತ್, ರಾಜೀವ್ ಗಾಂಧಿ ಹೌಸಿಂಗ್ ಸೊಸೈಟಿ ನಿರ್ದೇಶಕ ಜಿ.ಕೆ. ಹರೀಶ್, ಬಿಇಒ ಆರ್.ಕೃಷ್ಣಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ೧೧೦೧ಕ್ಕೂ ಅಧಿಕ ಮಕ್ಕಳು ಯೋಗದ ಮೂಲಕ ಸಾಮೂಹಿಕವಾಗಿ ಮಾಡಿದ ಹನುಮಾಸನ ಎಲ್ಲರ ಗಮನ ಸೆಳೆದು ನೆರೆದಿದ್ದವರ ಪ್ರಶಂಸೆಗೆ ಪಾತ್ರವಾಯಿತು. ಕಾರ್ಯಕ್ರಮ ಆರಂಭಕ್ಕೂ ಮೊದಲು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಸಿ.ಅರವಿಂದ್ರ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಚಂದನ್ ಅವರುಗಳು ಭೇಟಿ ನೀಡಿ ವಿದ್ಯಾರ್ಥಿ ಗಳಿಗೆ ಶುಭಕೋರಿದರು.

ಡಿಡಿಪಿಐ ಜವರೇಗೌಡ, ಯೋಗಾಚಾರ್ಯ ಡಾ.ಪಿ.ಎನ್.ಗಣೇಶ್ ಕುಮಾರ್, ಉಪ-ತಹಸೀಲ್ದಾರ್ ಹೆಚ್.ಆರ್.ಅರುಣ್ ಕುಮಾರ್, ಗ್ರಾ.ಪಂ.ಸದಸ್ಯ ಕೆ.ಪಿ.ಜಗದೀಶ್, ಯೋಗಗುರುಗಳಾದ ರೇವಣ್ಣ, ಯೋಗಮಣಿ, ಮಹದೇವ್, ಉಮೇಶ್, ಯೋಗಪಟುಗಳಾದ ಮಣಿಕಂಠ, ಹೆಚ್.ಆರ್.ನವೀನ್ ಕುಮಾರ್, ಪುರಸಭೆ ಸದಸ್ಯರಾದ ನಟರಾಜು, ಶಿವುನಾಯಕ್, ಸೈಯದ್ ಸಿದ್ದಿಕ್, ಮಾಜಿ ಸದಸ್ಯರಾದ ರಾ.ಜ.ಶ್ರೀಕಾಂತ್, ಕೆ.ವಿನಯ್, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular