ಉತ್ತರ ಪ್ರದೇಶ: ಬಿಜೆಪಿ ಸಂಸದ ವರುಣ್ ಗಾಂಧಿ ಅವರಿಗೆ ಪಿಲಿಭಿತ್ ಕ್ಷೇತ್ರದಿಂದ ಟಿಕೆಟ್ ಕೊಡಲು ಬಿಜೆಪಿ ನಿರಾಕರಿಸಿದೆ. ಈ ಬೆನ್ನಲ್ಲೇ ಅವರನ್ನು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕಾಂಗ್ರೆಸ್‌ಗೆ ಆಹ್ವಾನಿಸಿದ್ದಾರೆ. ವರುಣ್ ಗಾಂಧಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾದರೆ ನಾವು ತುಂಬಾ ಸಂತೋಷಪಡುತ್ತೇವೆ ಎಂದು ಹೇಳಿದ್ದಾರೆ.
ವರುಣ್ ಗಾಂಧಿ ಉತ್ತಮ ವ್ಯಕ್ತಿತ್ವ ಹೊಂದಿರುವ ಪ್ರಬಲ ನಾಯಕ ಮತ್ತು ಗಾಂಧಿ ಕುಟುಂಬದೊಂದಿಗೆ ಸಂಬಂಧವನ್ನು ಹೊಂದಿದ್ದಾರೆ. ಆದ್ದರಿಂದಾಗಿ ಬಿಜೆಪಿಯು ವರುಣ್ ಗಾಂಧಿ ಅವರಿಗೆ ಲೋಕಸಭೆ ಚುನಾವಣೆ ಟಿಕೆಟ್ ನೀಡಿಲ್ಲ. ಅವರು ಕಾಂಗ್ರೆಸ್‌ಗೆ ಬರಬೇಕೆಂದು ನನಗೆ ಅನಿಸುತ್ತದೆ. ನಮಗೆ ಅದರಿಂದ ಸಂತೋಷವಾಗುತ್ತದೆ ಎಂದು ಚೌಧರಿ ಹೇಳಿದರು. ವರುಣ್ ಗಾಂಧಿ ಬಿಜೆಪಿಯ ಸಂಸದರಾದರೂ ಕೂಡಾ ಮೋದಿ ಸರ್ಕಾರದ ವಿರುದ್ಧವೇ ಹಲವಾರು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ವರುಣ್ ಗಾಂಧಿಗೆ ಟಿಕೆಟ್ ತಪ್ಪುತ್ತಿದ್ದಂತೆ ಇತ್ತ ಅಖಿಲೇಶ್ ಯಾದವ್‌ರ ಸಮಾಜವಾದಿ ಪಕ್ಷವೂ ಕೂಡಾ ?ವರುಣ್ ಗಾಂಧಿಗಾಗಿ ತಮ್ಮ ಪಕ್ಷದ ಬಾಗಿಲು ತೆರೆದಿದೆ ಎಂದು ಹೇಳಿದೆ.