Friday, April 18, 2025
Google search engine

Homeರಾಜಕೀಯಹೆಚ್ಚುವರಿ ಅಕ್ಕಿ ನಿರಾಕರಣೆ:ಈ ತಿಂಗಳು ೫ ಕೆಜಿ ಅಕ್ಕಿ ಬದಲು ಹಣ-ಕೆ.ಎಚ್ ಮುನಿಯಪ್ಪ

ಹೆಚ್ಚುವರಿ ಅಕ್ಕಿ ನಿರಾಕರಣೆ:ಈ ತಿಂಗಳು ೫ ಕೆಜಿ ಅಕ್ಕಿ ಬದಲು ಹಣ-ಕೆ.ಎಚ್ ಮುನಿಯಪ್ಪ

ಬೆಂಗಳೂರು:  ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ವಿತರಿಸಲು ಹೆಚ್ಚುವರಿ 5 ಕೆಜಿ ಅಕ್ಕಿ ಪೂರೈಸುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಪೂರೈಕೆಗೆ ನಿರಾಕರಿಸಿದ ಹಿನ್ನೆಲೆ ಕಳೆದ ತಿಂಗಳು ಅಕ್ಕಿ ಬದಲು ಖಾತೆಗೆ ಹಣವನ್ನ ಹಾಕಿದ್ದ ರಾಜ್ಯ ಸರ್ಕಾರ ಇದೀಗ ಈ ತಿಂಗಳು ಕೂಡ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಹಣ ನೀಡಲಿದೆ.

ಈ ಕುರಿತು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಮಾಹಿತಿ ನೀಡಿದ್ದು, ಈ ತಿಂಗಳು ಕೂಡ ಹೆಚ್ಚುವರಿ 5 ಕೆಜಿ ಬದಲು ಹಣ ನೀಡುತ್ತೇವೆ. ಸೆಪ್ಟೆಂಬರ್​ ತಿಂಗಳಿನಲ್ಲೂ ಕೂಡ ಹೆಚ್ಚುವರಿ ಅಕ್ಕಿ ಸಿಗುವುದು ಅನುಮಾನ. ಹೀಗಾಗಿ ಅಕ್ಕಿ ಬದಲು ಹಣ ನೀಡುತ್ತೇವೆ.  ಆದಷ್ಟು ಬೇಗ ಹೆಚ್ಚುವರಿ ಅಕ್ಕಿ ಖರೀದಿಸಿ ವಿತರಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular