ಹೊಸೂರು : ಸಾಲಿಗ್ರಾಮ ತಾಲೂಕಿನ ಹಳಿಯೂರು ಗ್ರಾಪಂಗೆ ನೂತನ ಅಧ್ಯಕ್ಷರಾಗಿ ರೇಖಾಜಗದೀಶ್ ಉಪಾಧ್ಯಕ್ಷರಾಗಿ ಎಸ್.ಎಸ್ ನೂತನ್ ಅವಿರೋಧವಾಗಿ ಆಯ್ಕೆಯಾದರು.
ಗ್ರಾಪಂ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರೇಖಾಜಗದೀಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಎಸ್ ನೂತನ್ ಅವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸನ್ನ ಅವರು ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು
ನಂತರ ಮಾತನಾಡಿದ ನೂತನ ಅಧ್ಯಕ್ಷೆ ರೇಖಾಜಗದೀಶ್ ಮತ್ತು ಉಪಾಧ್ಯಕ್ಷ ಎಸ್.ಎಸ್.ನೂತನ್ ತಮ್ಮ ಅವಧಿಯಲ್ಲಿ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜತಗೆ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಶ್ರಮಿಸುವುದಾಗಿ ತಿಳಿದರು
ಚುನಾವಣಾ ಸಭೆಯಲ್ಲಿ ಸದಸ್ಯರಾದ ಮಂಜುಳಮ್ಮ,ಕಾಂಚನಾಅಜಯ್,ದಿನೇಶ,ಶ್ರೀನಿವಾಸ್,ಮಣಿ,ವಿನಯ್‌ಕುಮಾರ್, ಪಾರ್ವತಮ್ಮ, ಪ್ರವೀಣ್‌ಕುಮಾರ್,ಕಾವ್ಯ,ರೇಣುಕಾ,ಹೇಮಲತಾ,ಕೃಷ್ಣಮೂರ್ತಿ,ಶ್ರೀನಿವಾಸ್,ಮಲ್ಲೇಶಾಚಾರಿ ರಾಜೇಶ್ವರಿ, ,ಸಾಧಿಕ್ ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಪಿಡಿಒ ಚಿದಾನಂದ್, ಗುಮಾಸ್ತ ಚಂದ್ರು, ಬಿಲ್ ಕಲೆಕ್ಟರ್ ರಂಗಸ್ವಾಮಿ,
ಡಿಇಒ ಹರೀಶ್ ಇದ್ದರು.
ಮುನ್ನೆಚ್ಚರಿಕೆ ಕ್ರಮವಾಗಿ ಚುಂಚನಕಟ್ಟೆ ಉಪಪೊಲೀಸ್ ಠಾಣೆಯ ಮುಖ್ಯಪೇದೆ ಶ್ರೀನಿವಾಸ್ ಬಿಗಿ ಭದ್ರತೆ ಏರ್ಪಡಿಸಿದ್ದರು