Wednesday, February 25, 2026
Google search engine

Homeರಾಜ್ಯ49ನೇಯ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮ

49ನೇಯ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮ

ಡಾ.ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಪತ್ರಿಕೆಯ ವತಿಯಿಂದ ನಡೆಯುವ 49ನೇ ಸರಣಿ ಕೃತಿ ಬಿಡುಗಡೆ ಹಿರಿಯ ಸಾಹಿತಿ ಬಿ .ಸತ್ಯವತಿ ಭಟ್ ಕೊಳಚಪ್ಪುರವರ ಕೌಟುಂಬಿಕ ಕಥಾಸಂಕಲನ “ಹೆಜ್ಜಾಲದ ಬಿಳಲುಗಳು” ಕೃತಿ ಲೋಕಾರ್ಪಣೆಯೂ ಜನವರಿ 10ರಂದು ಶನಿವಾರ 10.30ಕ್ಕೆ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ಅರುಣ ನಾಗರಾಜ್ ವಹಿಸುವರು ಹೆಜ್ಜಾಲದ ಬಿಳಲುಗಳು ಕೌಟುಂಬಿಕ ಕಥಾಸಂಕಲನವನ್ನು ಸಾಹಿತಿ ಮತ್ತು ಸಂವಹನ ತಂತ್ರಜ್ಞಾನ ಇಂಜಿನಿಯರ್ ಬಿ. ಮಹಾಬಲ ತಿಲಕರವರು ಲೋಕಾರ್ಪಣೆಗೊಳಿಸಲಿದ್ದಾರೆ. ಕೃತಿ ಪರಿಚಯವನ್ನು ಹಿರಿಯ ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ಮಾಡುವರು. ಮುಖ್ಯ ಅತಿಥಿಗಳಾಗಿ ಯುವ ಲೇಖಕ ಲತೀಶ್ ಸಂಕೋಳಿಕೆ ಕೃತಿಯ ಲೇಖಕಿ ಸತ್ಯವತಿ ಭಟ್ ಕೊಳಚಪ್ಪು ಉಪಸ್ಥಿತರಿರುತ್ತಾರೆ. ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸುವರು. ಕವಯತ್ರಿ ಶಿಕ್ಷಕಿ ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಾಹಿತಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular