Friday, April 11, 2025
Google search engine

Homeಅಪರಾಧಸನ್ನಡತೆ ಆಧಾರದಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದ 7 ಕೈದಿಗಳ ಬಿಡುಗಡೆ

ಸನ್ನಡತೆ ಆಧಾರದಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದ 7 ಕೈದಿಗಳ ಬಿಡುಗಡೆ

ಕಲಬುರಗಿ: ವಿವಿಧ ಅಪರಾಧ ಪ್ರಕರಣಗಳಲ್ಲಿ14 ವರ್ಷ ಶಿಕ್ಷೆ ಮುಗಿಸಿ, ಜೀವಾವಧಿ ಶಿಕ್ಷೆಗೆ ಒಳಗಾದ ಕಲಬುರಗಿ ಕೇಂದ್ರ ಕಾರಾಗೃಹದ ಏಳು ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಸರಕಾರಿ ಆದೇಶದಂತೆ ಶನಿವಾರ ಅವಧಿಪೂರ್ವವಾಗಿ ಬಿಡುಗಡೆ ಮಾಡಲಾಗಿದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಮರಕಂದನಹಳ್ಳಿ ಗ್ರಾಮದ ನಿವಾಸಿ ಶಿವಪ್ಪ, ಸೋಲಾಪೂರ ಜಿಲ್ಲೆಯ ಶಂಕರಗಾಂ ನಿವಾಸಿ ಮಾಣಿಕ್ಯ, ಸೇಡಂ ತಾಲೂಕಿನ ಬಂಡೆಂಪಳ್ಳಿ ಗ್ರಾಮದ ಶಿವರಾಜ್ , ಮತ್ತು ಆನಂದ್ ಉಪ್ಪಾರ್, ಸೇಡಂನ ಮುಧೋಳ್ ಗ್ರಾಮದ ಅಂಜಿಲಪ್ಪ, ಭಾಲ್ಕಿ ತಾಲೂಕಿನ ಕೋನ್ ಮಳಖೇಡ್ ನಿವಾಸಿ ಆನಂದ್ ಹಾಗೂ ಚಿತ್ತಾಪುರ ತಾಲೂಕಿನ ಕಡೆಹಳ್ಳಿ ಗ್ರಾಮದ ಸಂಗಪ್ಪ ಎಂಬ ಕೈದಿಗಳನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಡುಗಡೆಗೊಂಡ ಕೈದಿಗಳಿಗೆ ಕೇಂದ್ರ ಕಾರಾಗೃಹದ ಅಧೀಕ್ಷಕಿ ಡಾ.ಅನಿತಾ ಆರ್., ಜೈಲಿನ ಅಧಿಕಾರಿಗಳು ಶಿಕ್ಷೆ ಪೂರೈಸಿ ಬಂಧನಮುಕ್ತರಾದ ಕೈದಿಗಳಿಗೆ ಪ್ರಮಾಣ ಪತ್ರ ನೀಡಿ ಹೊಸ ಜೀವನಕ್ಕೆ ಶುಭ ಹಾರೈಸಿದರು.

RELATED ARTICLES
- Advertisment -
Google search engine

Most Popular