ಮೈಸೂರು: ಮೈಸೂರು ನಗರದಕ್ಷಿಣ ವಲಯದ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವತಿಯಿಂದ ೨೦೨೪ನೇ ವರ್ಷದ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಕ್ಷೇತ್ರಶಿಕ್ಷಣಾಧಿಕಾರಿಗಳು ಭಾಗವಹಿಸಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡುತ್ತಾ ಮೈಸೂರು ಎಸ್‌ಎಸ್‌ಎಲ್ ಸಿ ಫಲಿತಾಂಶದಲ್ಲಿ ಉತ್ತಮ ಸ್ತಾನ ತಲುಪಲು ಎಲ್ಲಾ ಶಿಕ್ಷಕರೂ ಅಹರ್ನಿಶಿ ದುಡಿಯುತ್ತಿದ್ದು ಅದಕ್ಕೆ ನಮ್ಮೊಂದಿಗೆ ಶೈಕ್ಷಣಿಕವಾಗಿ ಶಿಕ್ಷಕರ ಸಂಘಟನೆಗಳು ಸಹಕರಿಸುತ್ತಿರುವುದುಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳುತ್ತಾ ಉತ್ತಮ ಫಲಿತಾಂಶಕ್ಕೆ ನಾವೆಲ್ಲರೂ ಶ್ರಮಿಸೋಣಎಂದುಕರೆ ನೀಡಿದರು.
ಮೈಸೂರು ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದಅಧ್ಯಕ್ಷರಾದ ಶ್ರೀ ಅರುಣ್‌ಕುಮಾರ್‌ರವರು ಮಾತನಾಡಿ ನಮ್ಮ ಜಿಲ್ಲೆಯು ಎಸ್‌ಎಸ್‌ಎಲ್ ಸಿ ಪಲಿತಾಂಶಕ್ಕಾಗಿ ಮಾದರಿ ಪ್ರಶ್ನೆಪತ್ರಿಕೆಗಳು, ಪಾಸಿಂಗ್ ಪ್ಯಾಕೇಜುಗಳು ಮುಂತಾದವುಗಳನ್ನು ನಮ್ಮ ಶಿಕ್ಷಕರುಗಳು ತಯಾರಿಸಿದ್ದು ಸುಲಭವಾಗಿಅತ್ಯಂತ ಹಿಂದುಳಿದ ಮಗುವೂ ಸಹ ಪಾಸಾಗಲು ಸಹಕಾರಿಯಾಗುವಂತೆಇದೆ. ನಾವುಗಳೆಲ್ಲರೂ ಮಗುವಿನ ಮಟ್ಟಕ್ಕೆ ಇಳಿದು ಕಲಿಸೋಣ, ಎಲ್ಲಾ ಮಕ್ಕಳು ಪಾಸಾಗಬೇಕೆಂಬುದೇ ನಮ್ಮೆಲ್ಲರಗುರಿ ಮತ್ತುಆಶಯವಾಗಬೇಕೆಂದು ತಿಳಿಸಿದರು.
ಮೈಸೂರುದಕ್ಷಿಣ ವಲಯದ ಸಹ ಶಿಕ್ಷಕರ ಸಂಘದಅಧ್ಯಕ್ಷರಾದಎನ್ ನಾಗರಾಜುರವರುಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಶ್ರೀಕಂಠ ಸ್ವಾಮಿ, ಜಿಲ್ಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಬಸವರಾಜು, ದೈಹಿಕ ಶಿಕ್ಷಕರ ಸಂಘದಅಧ್ಯಕ್ಷಗಂಗೇಶ್, ಶಿಕ್ಷಕರ ಸಂಘದ ಕಾರ್ಯದರ್ಶಿ ವಿ.ನಾಗಸುಂದರ್, ಖಜಾಂಚಿ ಕೆ.ಎಂ. ಮಹೇಶ್, ಸಂಘಟನಾಕಾರ್ಯದರ್ಶಿ ರಾಧಿಕಾಗೌಡ, ಜಯರಾಂ ಭಟ್, ಬಿ.ಆರ್.ಶಿವಕುಮಾರ್, ಕೃಷ್ಣ, ಭಾಸ್ಕರ್, ಮಹದೇವೇಗೌಡ ಹಾಜರಿದ್ದರು