ಮಂಡ್ಯ: ಕೆ.ಆರ್.ಎಸ್ ಡ್ಯಾಂ ನಿಂದ ನದಿಗೆ ನೀರು ಬಿಡುಗಡೆ ಹಿನ್ನಲೆ ಡ್ಯಾಂಗೆ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಡ್ಯಾಂ ನ ನೀರಿನ ಸಂಗ್ರಹ, ಬರುತ್ತಿರುವ ನೀರಿನ ಪ್ರಮಾಣ, ಹೊರ ಬಿಡಲಾಗ್ತಿರೋ ನೀರಿನ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.

ಡ್ಯಾಂ ಕೆಳಗಿನ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಇದೆ ವೇಳೆ ಮನವಿ ಮಾಡಿದರು.
ಪ್ರವಾಹ ಪರಿಸ್ಥಿತಿಯ ಬಗ್ಗೆ ದೂರುಗಳಿದ್ದಲ್ಲಿ ಹೆಲ್ಪ್ ಲೈನ್ ಸಂರ್ಕಿಸುವಂತೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಡಿಸಿ ಡಾ ಕುಮಾರ್ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.