ಪಿರಿಯಾಪಟ್ಟಣ: ಸ್ವಾತಂತ್ರ ಹೋರಾಟಗಾರರ ಆದರ್ಶ ಜೀವನವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ಎಂದು ಕಸಬಾ ಪಿಎಸಿಸಿಎಸ್ ಮಾಜಿ ಅಧ್ಯಕ್ಷ ವೆಂಕಟೇಶ್ ಹೇಳಿದರು.
ತಾಲೂಕಿನ ಬೂದಿತಿಟ್ಟು ಗ್ರಾಮದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಪ್ರಾಣಾರ್ಪಣೆ ಮಾಡಿದ್ದು ಅವರೆಲ್ಲರನ್ನು ಸ್ಮರಿಸಿ ಗೌರವಿಸಬೇಕಿದೆ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿ ವ್ಯಾಪಾರಕ್ಕಾಗಿ ಭಾರತ ದೇಶಕ್ಕೆ ಆಗಮಿಸಿದ ಬ್ರಿಟಿಷರು ನಮ್ಮಲ್ಲಿನ ಸಂಘಟನೆ ಕೊರತೆಯನ್ನು ಬಂಡವಾಳ ಮಾಡಿಕೊಂಡು ನಮ್ಮನ್ನಾಳಿದರು, ನಾವೆಲ್ಲರೂ ಜಾತಿ ಧರ್ಮ ಬೇದಭಾವ ಮರೆತು ಒಗ್ಗಟ್ಟಿನಿಂದ ಜೀವಿಸಿದಾಗ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಗ್ರಾ.ಪಂ ಸದಸ್ಯ ರವಿಚಂದ್ರ ಬೂದಿತಿಟ್ಟು ಅವರು ಮಾತನಾಡಿ ವಿದ್ಯಾರ್ಥಿ ಜೀವನದಿಂದಲೇ ದೇಶ ಹಾಗೂ ನಾಡು ನುಡಿ ಗೌರವಿಸುವ ಮನೋಭಾವನೆ ಬೆಳೆಸಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬಾಳುವಂತೆ ಕರೆ ನೀಡಿದರು.
ಮುಖಂಡರಾದ ವಿಜಯ್, ಶಿಕ್ಷಕ ಆನಂದ್ ಸ್ವಾತಂತ್ರ್ಯ ದಿನ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಈ ವೇಳೆ ವಿದ್ಯಾರ್ಥಿಗಳು ನಡೆಸಿಕೊಟ್ಟ ದೇಶಭಕ್ತಿ ಕುರಿತ ನೃತ್ಯ ಹಾಗೂ ಸ್ವತಂತ್ರ ಹೋರಾಟಗಾರರ ಕುರಿತ ಅನಿಸಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭ ಗ್ರಾ.ಪಂ ಸದಸ್ಯ ಶೃತಿ, ಮುಖ್ಯ ಶಿಕ್ಷಕ ಮೋಹನ್ ಕುಮಾರ್, ಶಿಕ್ಷಕಿ ಉಷಾ, ಅಂಗನವಾಡಿ ಕಾರ್ಯಕರ್ತೆ ಶೋಭಾ, ಮುಖಂಡರಾದ ಗಣೇಶ್, ಗಿರೀಶ್, ಕೃಷ್ಣ, ಕುಮಾರ್, ಪತ್ರಕರ್ತ ಇಮ್ತಿಯಾಜ್ ಅಹಮದ್ ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳು ಇದ್ದರು.