ಮುಂಬೈ: ಪೋಖ್ರಾನ್-I ಮತ್ತು ಪೋಖ್ರಾನ್-II ಪರಮಾಣು ಪರೀಕ್ಷೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖ್ಯಾತ ಪರಮಾಣು ವಿಜ್ಞಾನಿ ಮತ್ತು ಸ್ಫಟಿಕಶಾಸ್ತ್ರಜ್ಞ ಡಾ. ರಾಜಗೋಪಾಲ ಚಿದಂಬರಂ ಶನಿವಾರ ನಿಧನರಾಗಿದ್ದಾರೆ.
ಡಾ.ಆರ್.ಚಿದಂಬರಂ(89) ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ವಿಜ್ಞಾನಿಯಾಗಿ, ಭಾಭಾ ಪರಮಾಣು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ, ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿ, ಪರಮಾಣು ಶಕ್ತಿ ಇಲಾಖೆಯ ಕಾರ್ಯದರ್ಶಿಯಾಗಿ ಡಾ.ಆರ್.ಚಿದಂಬರಂ ಕಾರ್ಯ ನಿರ್ವಹಿಸಿದ್ದರು.
ಭಾರತ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದ ಡಾ.ಆರ್.ಚಿದಂಬರಂ, 1994-95ರ ಅವಧಿಯಲ್ಲಿ ಇಂಟರ್ ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿಯಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರು.
ಡಾ.ಆರ್.ಚಿದಂಬರಂ ಅವರು 1975ರ ಪೋಖ್ರಾನ್–1 ಪರೀಕ್ಷೆ ಹಾಗೂ 1998ರಲ್ಲಿ ನಡೆದ ಪೋಖ್ರಾನ್ –2 ಪರೀಕ್ಷೆಯ ಸಂಯೋಜಕರಾಗಿದ್ದರು. ಡಾ.ಆರ್.ಚಿದಂಬರಂ ಅವರಿಗೆ 1975ರಲ್ಲಿ ಪದ್ಮಶ್ರೀ, 1999ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ದೊರೆತಿದೆ.