Wednesday, April 16, 2025
Google search engine

Homeರಾಜ್ಯಸುದ್ದಿಜಾಲಪ್ರಸಿದ್ಧ ನಿರೂಪಕಿ ಅಪರ್ಣಾ ನಿಧನ ಕನ್ನಡ ಸಾಂಸ್ಕೃತಿಕ , ನಿರೂಪಣೆ ಕ್ಷೇತ್ರಕ್ಕೆ ನಷ್ಟ-ಸುರೇಶ್ ಎನ್ ಋಗ್ವೇದಿ...

ಪ್ರಸಿದ್ಧ ನಿರೂಪಕಿ ಅಪರ್ಣಾ ನಿಧನ ಕನ್ನಡ ಸಾಂಸ್ಕೃತಿಕ , ನಿರೂಪಣೆ ಕ್ಷೇತ್ರಕ್ಕೆ ನಷ್ಟ-ಸುರೇಶ್ ಎನ್ ಋಗ್ವೇದಿ ಸಂತಾಪ

ಚಾಮರಾಜನಗರ: ಪ್ರಸಿದ್ಧ ನಿರೂಪಕಿ, ಸಿನಿಮಾ ಹಾಗೂ ದೂರದರ್ಶನದ ಕಲಾವಿದರು ಆಗಿದ್ದ ಶ್ರೀಮತಿ ಅಪರ್ಣಾರವರ ನಿಧನ ಕನ್ನಡ ಸಾಂಸ್ಕೃತಿಕ ಹಾಗೂ ನಿರೂಪಣೆ ಕ್ಷೇತ್ರಕ್ಕೆ ನಷ್ಟವನ್ನು ಉಂಟುಮಾಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆ ,ಶಬ್ದ ,ಏರಿಳಿತ, ಧ್ವನಿ ತರಂಗಗಳ ಮೂಲಕ ಕನ್ನಡ ಭಾಷೆಯ ಸಂಸ್ಕೃತಿ ಮತ್ತು ಪರಂಪರೆಯನ್ನು ಬಹು ಎತ್ತರಕ್ಕೆ ಕೊಂಡೊಯ್ದು ಕೇಳುಗರಿಗೆ ಪರಮಾನಂದವನ್ನು ಉಂಟು ಮಾಡುತ್ತಿದ್ದ ನಿರೂಪಣಾ ಶೈಲಿ ಮರೆಯಲಾಗದು. ಲಕ್ಷಾಂತರ ಜನರ ಮನಸೂರೆಗೊಂಡಿತ್ತು.

ಪ್ರತಿ ಕನ್ನಡದ ಶಬ್ದಕ್ಕೂ ಧ್ವನಿಯ ಮೂಲಕ ಅಪ್ಪಟ ಚಿನ್ನದಂತೆ ಮಾಧುರ್ಯವನ್ನು, ಅರ್ಥವನ್ನು ಹಾಗೂ ತರಂಗಗಳನ್ನು ಉಂಟು ಮಾಡಿದ್ದ ಅವರ ನಿರೂಪಣೆ ಕನ್ನಡ ಭಾಷಾ ಲೋಕಕ್ಕೆ ಅಗಾಧ ನಷ್ಟವಾಗಿದೆ. ನೂರಾರು ನಿರೂಪಣಾ ಕಾರರಿಗೆ ಮಾದರಿಯಾಗಿತ್ತು. ಅವರನ್ನೇ ಅನುಸರಿಸುವಂತೆ ಕನ್ನಡ ಲೋಕ ಮಾರ್ಪಟ್ಟಿತು.

ನೂರಾರು ಕಾರ್ಯಕ್ರಮಗಳ ನಿರೂಪಣೆಯ ಮೂಲಕ ತಮ್ಮದೇ ಆದ ನಿರೂಪಣ ಕ್ಷೇತ್ರವನ್ನು ಮುಕ್ತವಾಗಿ ಯುವಕರು ಮತ್ತು ಯುವತಿಯರು ಕಲಿಯುವಂತೆ ಪ್ರೇರಣೆ ನೀಡಿದ ಮಹಾ ಶಕ್ತಿ ಅಪರ್ಣಾಎಂದು ಋಗ್ವೇದಿ ತಿಳಿಸಿ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿ ಹಾಗೂ ಜನತೆಯ ಪರವಾಗಿ ಭಾವಪೂರ್ಣವಾದ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.

RELATED ARTICLES
- Advertisment -
Google search engine

Most Popular