ಹನೂರು: ವಾಣಿಜ್ಯ ಮಳಿಗೆಯ ಬಾಡಿಗೆ ಬಾಕಿ ಇರುವ ಮಳಿಗೆದಾರರು ಮೂರು ದಿನದ ಒಳಗೆ ಹಣ ಪಾವತಿಸುವಂತೆ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಹೇಶ್ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
ಹನೂರು ಪಟ್ಟಣದಲ್ಲಿ ಪಟ್ಟಣ ಪಂಚಾಯತಿಗೆ ಸೇರಿದ ವಾಣಿಜ್ಯ ಮಳಿಗೆಗಳಲ್ಲಿ ಬಾಡಿಗೆ ಇರುವ ಅಂಗಡಿಗಳಿಗೆ ಸಿಬ್ಬಂದಿಗಳ ಜೊತೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಹೇಶ್ ಗುರುವಾರದಂದು ತಾವೇ ಖುದ್ದು ಬಾಡಿಗೆ ವಸೂಲಾತಿಗೆ ಇಳಿದಿದ್ದರು. ಈ ವೇಳೆ ಕೆಲ ಅಂಗಡಿಗಳಲ್ಲಿ ಒಂದು ವರ್ಷ ಪಾವತಿ ಮಾಡದಂತಹ ಮಾಲೀಕರಿಗೆ ಕಡಕ್ ಸೂಚನೆ ನೀಡಿದ್ದಾರೆ. ಇನ್ನೂ ಮೂರುದಿನದಲ್ಲಿ ಬಾಡಿಗೆ ಪಾವತಿಸದಿದ್ದರೆ ಅಂಗಡಿ ಮಳಿಗೆಗಳಿಗೆ ಬೀಗ ಮುದ್ರೆ ಹಾಕಲಾಗವುದು ಎಂದು ತಿಳಿಸಿದರು.
ಹನೂರು ಪಟ್ಟಣ ಪಂಚಾಯತಿಗೆ ಸೇರಿದ ವಾಣಿಜ್ಯ ಮಳಿಗೆಗಳಲ್ಲಿ ಒಟ್ಟಾರೆ ಈ ವರೆಗೆ ಸುಮಾರು 40 ಲಕ್ಷ ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿರುವುದರಿಂದ ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಸಿಬ್ಬಂದಿಗಳಿಗೆ ವೇತನ ನೀಡಲು ಕಷ್ಟವಾಗುತ್ತಿದೆ. ಲಕ್ಷಾಂತರ ಬಾಡಿಗೆಯನ್ನು ಈ ರೀತಿ ಬಾಕಿ ಉಳಿಸಿಕೊಂಡರೆ ಹೇಗೆ ಅಭಿವೃದ್ಧಿ ಮಾಡಲು ಸಾಧ್ಯ. ಆದ್ದರಿಂದ ಸಕಾಲಕ್ಕೆ ಪಾವತಿಸಿ ಎಂದು ತಿಳಿಸಿದರು.ಈ ವೇಳೆ ಪ ಪಂ ಸಿಬ್ಬಂದಿಗಳಾದ. ಪ್ರತಾಪ್ ,ನಾಗೇಂದ್ರ ಸೇರಿದಂತೆ ಹಲವರು ಹಾಜರಿದ್ದರು.