ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಹಾಗೂ ಇತರ ಆರೊಪಿಗಳಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ.
ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಇತರೆ ಆರೋಪಿಗಳು ಈಗಾಗಲೇ ವಕೀಲರ ಜೊತೆಗೆ ಚರ್ಚೆ ನಡೆಸಿದ್ದು, ಇಂದು ಸೋಮವಾರ ಪ್ರಕರಣದಲಿ ಇದುವರೆಗಿನ ವರದಿ ಕುರಿತು ವಿಚಾರಣಾ ಕೋರ್ಟ್ ನಿಂದ ಅಧಿಕೃತ ದಾಖಲೆ ಪಡೆದು ಕೋರ್ಟ್ ಗೆ ಜಾಮೀನು ಅರ್ಜಿಗಳು ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ದರ್ಶನ್‌ಗೆ ವಿಶೇಷ ಸೆಲ್‌ನಲ್ಲಿ ಇಡಲಾಗಿದ್ದು, ದರ್ಶನ್ ಯಾರೊಂದಿಗೆ ಹೆಚ್ಚು ಮಾತನಾಡುತ್ತಿಲ್ಲ. ಜೈಲು ಮೆನವಿನಂತೆ ನೀಡಿದ ಉಪಹಾರ ಹಾಗೂ ಊಟ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.