Thursday, July 17, 2025
Google search engine

Homeಅಪರಾಧರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್ ಗೆ ಇಂದು ನಿರ್ಣಾಯಕ ದಿನ

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್ ಗೆ ಇಂದು ನಿರ್ಣಾಯಕ ದಿನ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 131 ದಿನ ಜೈಲುದಲ್ಲಿದ್ದ ನಂತರ ಜಾಮೀನಿನಲ್ಲಿ ಹೊರಬಂದಿರುವ ನಟ ದರ್ಶನಗೆ ಇಂದು ಮಹತ್ವದ ದಿನ. ಹೈಕೋರ್ಟ್ ನೀಡಿದ ಜಾಮೀನನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸಲ್ಲಿಸಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.

ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ನೇತೃತ್ವದ ಪೀಠದ ಮುಂದೆ ವಿಚಾರಣೆ ನಡೆಯಲಿದ್ದು, ನ್ಯಾಯಾಲಯ ವಿಸ್ತೃತ ವಾದ ಆಲಿಸಲಿದೆ. ಇದಕ್ಕೂ ಮುನ್ನ ವಿಚಾರಣೆಯಲ್ಲಿ ದರ್ಶನ ಮತ್ತು ಪವಿತ್ರಾ ಗೌಡ ಅವರ ಪಾತ್ರದ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆದಿದೆ.

ಕೊಲೆಯಲ್ಲಿ ದರ್ಶನ್ ನೇರವಾಗಿ ಭಾಗಿಯಾಗಿದೆಯೇ? ಸಾಕ್ಷ್ಯಗಳೇನು? ಎಂಬುದರ ಕುರಿತು ಇಂದು ಪೊಲೀಸರು ಹೆಚ್ಚಿನ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಲಿದ್ದಾರೆ. ಬಳಿಕ ದರ್ಶನ ಪರ ವಕೀಲರು ತಮ್ಮ ವಾದ ಮಂಡಿಸಲಿದ್ದಾರೆ.

ಹೈಕೋರ್ಟ್ ನೀಡಿರುವ ಜಾಮೀನು ಮುಂದುವರಿಸಬೇಕೆ ಅಥವಾ ರದ್ದುಪಡಿಸಬೇಕೆ ಎಂಬ ನಿರ್ಣಯ ಇಂದು ಸುಪ್ರೀಂ ಕೋರ್ಟ್ ಕೈಗೊಳ್ಳುವ ಸಾಧ್ಯತೆ ಇದೆ. ಸದ್ಯ ಶೂಟಿಂಗ್‌ಗೆ ತೊಡಗಿಸಿಕೊಂಡಿರುವ ದರ್ಶನ ವಿದೇಶ ಪ್ರವಾಸದಲ್ಲಿದ್ದಾರೆ. ಇಂದು ನಡೆಯಲಿರುವ ವಿಚಾರಣೆಗೆ ನ್ಯಾಯಾಂಗ, ರಾಜಕೀಯ ವಲಯದಲ್ಲೂ ಕುತೂಹಲ ಮೂಡಿದೆ.

RELATED ARTICLES
- Advertisment -
Google search engine

Most Popular