ಮಂಡ್ಯ: ‘ರಾಜ್ಯ ಧರ್ಮ ನ್ಯೂಸ್’ ನ ವರದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಡೆಗೂ ಎಚ್ಚೆತ್ತಿದ್ದು, ಹೆದ್ದಾರಿ ಹಾಗು ಸರ್ವಿಸ್ ರಸ್ತೆಗೆ ಬೀಳುವ ಹಂತದಲ್ಲಿದ್ದ ಬೃಹತ್ ಹೈ ಟೆನ್ಷನ್ ಲೇನ್ ನ ವಿದ್ಯುತ್ ಕಂಬಗಳ ದುರಸ್ಥಿ ಕಾರ್ಯ ಮಾಡುತ್ತಿದೆ.
ಬೆಂ- ಮೈ ನೂತನ ದಶಪಥದ ಹೆದ್ದಾರಿಯ ಸರ್ವೀಸ್ ರಸ್ತೆ ಪಕ್ಕದಲ್ಲಿ ಹಾಕಲಾಗಿರುವ ಎತ್ತರದ ಹೈ ಟೆನ್ಷನ್ ಲೇನ್ ನ ವಿದ್ಯುತ್ ಕಂಬಗಳಲ್ಲಿನ ಅಡ್ಡಪಟ್ಟಿಯನ್ನು ದುಷ್ಕರ್ಮಿಗಳು, ಕಳ್ಳರು ಕಳ್ಳತನ ಮಾಡಿದ್ದು, ಇದರಿಂದಾಗಿ ವಿದ್ಯುತ್ ಕಂಬಗಳು ವಾಲುವ ಸ್ಥಿತಿಯಲ್ಲಿದ್ದವು.
ಇದರಿಂದಾಗಿ ಹೆದ್ದಾರಿಯಲ್ಲಿ ಓಡಾಡುವ ವಾಹನ ಸವಾರರು ಆತಂಕದಿಂದ ವಾಹನ ಚಲಾಯಿಸುತ್ತಿದ್ದರು.
ಈ ಸಮಸ್ಯೆ ಕುರಿತು ಕಳೆದ ವಾರ “ಮೈ- ಬೆಂ ಹೆದ್ದಾರಿಯಲ್ಲಿ ವಿದ್ಯುತ್ ಕಂಬಗಳ ನಟ್ಟು, ಬೋಲ್ಟ್, ಪ್ಲೇಟ್ ಕಳ್ಳತನ: ದುರಸ್ಥಿಗೆ ಆಗ್ರಹ” ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿ ಬಿತ್ತರಿಸಿ ‘ರಾಜ್ಯ ಧರ್ಮ’ ನ್ಯೂಸ್ ಗಮನ ಸೆಳೆದಿತ್ತು.

ರಾಜ್ಯ ಧರ್ಮ ನ್ಯೂಸ್ ನ ವರದಿಗೆ NHAI ಎಚ್ಚೆತ್ತಿದ್ದು, ತುರ್ತು ಕ್ರಮ ವಹಿಸಿ ದುರಸ್ಥಿ ಕಾರ್ಯ ಕೈಗೊಂಡಿದೆ.
‘ರಾಜ್ಯ ಧರ್ಮ’ ನ್ಯೂಸ್ ಸಾಮಾಜಿಕ ಕಳಕಳಿ ವರದಿಗೆ ಜನರು, ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿ, ಪ್ರಶಂಸಿಸುತ್ತಿದ್ದಾರೆ.