ನಂಜನಗೂಡು: ಪ್ರತಿನಿಧಿಗಳು ಭಾರತೀಯ ಜೀವ ವಿಮಾ ನಿಗಮದ ಅಡಿಪಾಯ ಎಂದು ಭಾರತೀಯ ಜೀವ ವಿಮಾ ನಿಗಮದ ಮಾರ್ಕೆಟಿಂಗ್ ವ್ಯವಸ್ಥಾಪಕ ನಾಗೇಶ್ ರಾವ್ ಹೇಳಿದರು.
ಅವರು ನಗರದ ನಂದಿ ಕನ್ವೆನ್ಷನ್ ಕಲ್ಯಾಣ ಮಂಟಪದಲ್ಲಿ ನಡೆದ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ವಿಭಾಗಿಯ ಮಂಡಳಿಯ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿಯೇ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟ 1964 ಸಂಘಟನೆಯು ಬಹಳ ಬಲಾಢ್ಯವಾಗಿದೆ. ಸಂಘಟನೆಯೊಂದಿಗೆ ಜೀವವಿಮ ಅಧಿಕಾರಿಗಳು ಸಹಕಾರ ನೀಡುತ್ತಾ ಬಂದಿದ್ದಾರೆ. ಅಲ್ಲದೆ ಪ್ರತಿನಿಧಿಗಳ ಅನೇಕ ಬೇಡಿಕೆಗಳನ್ನು ಈಗಾಗಲೇ ಈಡೇರಿಸಿ ಸಹಕರಿಸುತ್ತಾ ಬಂದಿದ್ದೇವೆ. ಇನ್ನು ಕೆಲವು ಬೇಡಿಕೆಗಳು ಮಾತ್ರ ಬಾಕಿ ಇವೆ. ಅವುಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸಲು ನಿಗಮ ಮುಂದಾಗಲಿದೆ ಎಂದರು
ವಿಭಾಗಿಯ ಒಕ್ಕೂಟದ ಅಧ್ಯಕ್ಷ ಅಶೋಕ್ ಮಾತನಾಡಿ
ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಹೋರಾಟದ ಫಲವಾಗಿ ಇಂದು ಪ್ರತಿನಿಧಿಗಳಿಗೆ ಅನೇಕ ಸವಲತ್ತುಗಳು ದೊರಕುವಂತಾಗಿದೆ. ಸಂಘಟನೆಯಿಂದ ಮಾತ್ರ ಪ್ರತಿನಿಧಿಗಳ ಅಭಿವೃದ್ಧಿ ಸಾಧ್ಯ ಆದ್ದರಿಂದ ಜೀವ ವಿಮಾ ಪ್ರತಿನಿಧಿಗಳು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಶ್ರೀನಿವಾಸಚಾರ್ಯ ಮಾತನಾಡಿ ಸಂಘಟನೆಯ ಹೋರಾಟದ ಫಲವಾಗಿ ನಿಗಮ ಪ್ರತಿನಿಧಿಗಳ ಅನೇಕ ಬೇಡಿಕೆಗಳನ್ನು ಈಡೇರಿಸಿದೆ ಅಲ್ಲದೆ ಪಾಲಿಸಿದಾರರಿಗೆ ಪಾಲಿಸಿ ಮೇಲಿನ ಸಾಲದ ಬಡ್ಡಿಯನ್ನು ಕಡಿಮೆಗೊಳಿಸಬೇಕು, ಅವರಿಗೆ ಬೋನಸ್ ಹೆಚ್ಚುಗೊಳಿಸಬೇಕು, ಜೀವ ವಿಮಾ ಪ್ರತಿನಿಧಿಗಳ ಕುಟುಂಬಗಳಿಗೂ ಸಹ ಆರೋಗ್ಯ ವಿಮೆಯನ್ನು ವಿಸ್ತರಿಸಬೇಕು ಎಂಬುದು ಪ್ರತಿನಿಧಿಗಳ ಪ್ರಮುಖ ಬೇಡಿಕೆಯಾಗಿದ್ದು. ಅವುಗಳು ಸಹಕಾರಗೊಳ್ಳಬೇಕಾದರೆ ಸಂಘಟನೆ ಹೆಚ್ಚು ಬಲಗೊಳ್ಳಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ನಂಜನಗೂಡು ಹಿರಿಯ ಶಾಖಾಧಿಕಾರಿ ರಾಮಸ್ವಾಮಿ.
ಉಪ ಸಾಕಾಧಿಕಾರಿ ನರಸಿಂಹನ್. ರಾಷ್ಟ್ರೀಯ ಒಕ್ಕೂಟದ ವೆಲ್ಫೇರ್ ಅಧ್ಯಕ್ಷ ನಾರಾಯಣ ರೆಡ್ಡಿ, ಮಂಜುನಾಥ್, ಜೈಪಾಲ್ ರೆಡ್ಡಿ, ಸವಿತಾ, ಶುಭ, , , ಕರ್ನಾಟಕ ಚೀಫ್ ಅಡ್ವೈಸರ್ ಕಮಿಟಿ ಉಪಾಧ್ಯಕ್ಷ ಕೆಂಪೇಗೌಡ, ಸ್ವಾಮಿ ಗೌಡ, ಪುಟ್ಟಸ್ವಾಮಿ, ಡಿ.ಅರುಣ್ ಕುಮಾರ್, ಆಶಾಲತಾ, ರಾಮಮೂರ್ತಿ, ನರಸಿಂಹ, ಮಹೇಶ್, , ನಾಗೇಂದ್ರ ಪ್ರಸಾದ್ ಎಚ್ಆರ್ ಶಿವಕುಮಾರ್. ಮಾದಪ್ಪ. ಈರೇಗೌಡ ಗುರುಸಿದ್ದಾಚಾರಿ ಸೋಮಶೇಖರ್. ಆಶಾ ಕೆ ದಾಸ್. ಶಶಿಕಲಾ ಇಂದ್ರ. ರಂಗಸ್ವಾಮಿ. ನಿಜಲಿಂಗಪ್ಪ. ಶಿವಳ್ಳಿ. ಮಾಧು. ಮಹೇಶ್. ದೊರೆಸ್ವಾಮಿ. ಲಿಂಗಪ್ಪ ಸೇರಿದಂತೆ ಹಲವಾರು ಪ್ರಮುಖರು ಇದ್ದರು.