Friday, April 4, 2025
Google search engine

HomeUncategorizedರಾಷ್ಟ್ರೀಯಗಣರಾಜ್ಯೋತ್ಸವ: ಅಗ್ನಿ ಶಾಮಕ, ನಾಗರಿಕ ರಕ್ಷಣೆ ಸೇರಿ ಒಟ್ಟು 942 ಪೊಲೀಸ್ ಸಿಬ್ಬಂದಿಗೆ ವಿವಿಧ ಶೌರ್ಯ...

ಗಣರಾಜ್ಯೋತ್ಸವ: ಅಗ್ನಿ ಶಾಮಕ, ನಾಗರಿಕ ರಕ್ಷಣೆ ಸೇರಿ ಒಟ್ಟು 942 ಪೊಲೀಸ್ ಸಿಬ್ಬಂದಿಗೆ ವಿವಿಧ ಶೌರ್ಯ , ಸೇವಾ ಪದಕ ಘೋಷಣೆ

ನವದೆಹಲಿ: ಗಣರಾಜ್ಯೋತ್ಸವದ ಅಂಗವಾಗಿ ಅಗ್ನಿ ಶಾಮಕ, ನಾಗರಿಕ ರಕ್ಷಣೆ ಸೇರಿ ಒಟ್ಟು 942 ಪೊಲೀಸ್ ಸಿಬ್ಬಂದಿಗೆ ವಿವಿಧ ಶೌರ್ಯ ಹಾಗೂ ಸೇವಾ ಪದಕಗಳನ್ನು ಕೇಂದ್ರ ಸರ್ಕಾರ ಶನಿವಾರ ಘೋಷಿಸಿದೆ.

ಇದರಲ್ಲಿ 95 ಶೌರ್ಯ ಪ್ರಶಸ್ತಿಗಳಿವೆ.

ಪದಕ ಪುರಸ್ಕೃತರಲ್ಲಿ ವೈಯಕ್ತಿಕ ಸಿಬ್ಬಂದಿ, ಅಗ್ನಿ ಶಾಮಕ, ಹೋಮ್ ಗಾರ್ಡ್‌ ಹಾಗೂ ನಾಗರಿಕ ಸೇವಾ ಸಿಬ್ಬಂದಿ ಸೇರಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಶೌರ್ಯ ಪ್ರಶಸ್ತಿ ವಿಜೇತರಲ್ಲಿ ತಲಾ 28 ಮಂದಿ ಎಡಪಂಥೀಯ ತೀವ್ರಗಾಮಿ ಹೋರಾಟಗಾರರು ಇರುವ ಪ್ರದೇಶದಲ್ಲಿ ಹಾಗೂ ಜಮ್ಮು ಕಾಶ್ಮೀರ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವವರು. 3 ಮಂದಿ ಈಶಾನ್ಯ ಭಾರತದಲ್ಲಿ ಹಾಗೂ ಉಳಿದ 26 ಮಂದಿ ದೇಶದ ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.

101 ರಾಷ್ಟ್ರಪತಿ ಪದಕಗಳ ಪೈಕಿ, 85 ಮಂದಿ ಪೊಲೀಸ್ ಸಿಬ್ಬಂದಿ, 5 ಅಗ್ನಿ ಶಾಮಕ ಸಿಬ್ಬಂದಿ, 7 ನಾಗರಿಕ ಸೇವಾ ಸಿಬ್ಬಂದಿ ಹಾಗೂ ಹೋಮ್‌ಗಾರ್ಡ್‌ಗಳು ಮತ್ತು 4 ಇತರೆ ಸಿಬ್ಬಂದಿಗಳಿದ್ದಾರೆ.

746 ಸೇವಾ ಪದಕಗಳ ಪೈಕಿ, 634 ಪೊಲೀಸ್‌, 37 ಅಗ್ನಿಶಾಮಕ, 39 ನಾಗರಿಕಾ ರಕ್ಷಣಾ ಹಾಗೂ ಹೋಮ್‌ ಗಾರ್ಡ್‌ ಮತ್ತು 36 ಇತರೆ ಸಿಬ್ಬಂದಿ ಸೇರಿದ್ದಾರೆ.

RELATED ARTICLES
- Advertisment -
Google search engine

Most Popular