ಗುಂಡ್ಲುಪೇಟೆ: ಪಟ್ಟಣದ ಜಾಕೀರ್ ಹುಸೇನ್ ನಗರದಲ್ಲಿ ಪುರಸಭಾ ಸದಸ್ಯರಾದ ರಾಜ್ ಗೋಪಾಲ್ ಹೆಚ್.ಆರ್.ರವರು ಧ್ವಜಾರೋಹಣ ನೇರವೇರಿಸಿದರು.
ನಂತರ ಕಾರ್ಯಕ್ರಮವನ್ನು ಕುರಿತು ಪುರಸಭಾ ಸದಸ್ಯರಾದ ರಾಜ್ ಗೋಪಾಲ್ ಮಾತನಾಡಿ, ದೇಶವ್ಯಾಪ್ತಿಯಲ್ಲಿ ಇಂದು ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ ನಮ್ಮ ಭಾರತದ ಸಂವಿಧಾನ ಇಡೀ ದೇಶದಲ್ಲೇ ಅತ್ಯಂತ ದೊಡ್ಡ ಸಂವಿಧಾನ ಅಂಬೇಡ್ಕರ್ ರವರು ನಮ್ಮಸಂವಿಧಾನ ರಚನೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇಂದು ನಮ್ಮ ದೇಶದಲ್ಲಿ ಶಾಂತಿ,ಸುವ್ಯವಸ್ಥೆ,ಸೌಹಾರ್ದ ಯುತವಾಗಿ ಎಲ್ಲಾ ಧರ್ಮ,ಜಾತಿ,ಸಮುದಾಯಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಇಡೀ ದೇಶಕ್ಕೆ ಮಾದರಿಯಾದ ಸಂವಿಧಾನದ ಪಿತಾಮಹ ನಮ್ಮಅಂಬೇಡ್ಕರ್ ರವರು ಆದ್ದರಿಂದ ನಾವೆಲ್ಲರೂ ಸಹ ಅವರ ತತ್ವ ಸಿದ್ದಾಂತಗಳನ್ನು ಅನುಸರಿಸಿ ಮುಂದೆ ಸಾಗಬೇಕಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲಾ ವ್ಯಾಪ್ತಿಯಲ್ಲಿ ಬರುವ ಮೂರು ಅಂಗನವಾಡಿ ಕೇಂದ್ರಗಳ ಮಕ್ಕಳು ಹಾಗೂ ಶಿಕ್ಷಕರು ಮತ್ತು ಶಾಲೆಯ ಮುಖ್ಯೋಪಾಧ್ಯಾಯ ಮೋಹನ್ ಕುಮಾರ್ ,ಶರ್ಮಿಳ ಹಾಜರಿದ್ದರು.