ಮೈಸೂರು: ಸಂವಿಧಾನ ಜಾರಿದಿನದ ನೆನಪಿಗಾಗಿ ಭಾರತೀಯ ಕಮ್ಯೂನಿಷ್ಟ್ (ಮಾರ್ಕ್ಸಿಸ್ಟ್) ಪಕ್ಷದ ಸ್ಥಳೀಯ ಸಮಿತಿ ವತಿಯಿಂದ 76 ನೇ ಗಣರಾಜ್ಯೋತ್ಸವ ಆಚರಣೆಯನ್ನು ಮಾಡಲಾಯಿತು.
ಕುವೆಂಪುನಗರದ ಅಶೋಕ ಪುರಂ ಪೋಲೀಸ್ ಸ್ಟೇಷನ್ ಎದುರಿನ ಅಂಬೇಡ್ಕರ್ ಪುತ್ತಳಿಗೆ ಪಕ್ಷದ ಜಿಲ್ಲಾ ಸಂಘಟನಾ ಸದಸ್ಯರಾದ ಕಾ. ವಿಜಯ್ ಕುಮಾರ್ ಮಾಲಾರ್ಪಣೆ ಮಾಡಿ,ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಂ.ಜಗನಾಥ್, ಕಾಂ.ಸಿ ಕಾರ್ ಕೃಷ್ಣಮೂರ್ತಿ, ಕಾಂ.ರಾಜೇಂದ್ರ, ಸ್ಥಳೀಯ ಸಮಿತಿ ಕಾರ್ಯದರ್ಶಿ ಎನ್ ಸುಬ್ರಹ್ಮಣ್ಯ, ಕಾಂ.ಈಶ್ವರ್, ಕಾಂ.ವರುಣಾ ನಾಗರಾಜ್, ಕಾಂ ನಾಗೇಶ್, ಕಾಂ.ಪುಟ್ಟಸಸ್ವಾಮಿ,ಕಾಂ.ಮಹೇಶ್ ಇತರರು ಇದ್ದರು.