ಮದ್ದೂರು: ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಅಭಿಮಾನಿ ಒಬ್ಬ ನೀಡಿದ ರೋಜಾ ವುಡ್ ಚೇರ್ ನು ಸ್ವೀಕರಿಸಿದ ನೂತನ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಗ್ರಾಮದ ಮುಖಂಡ ಸಾಯಿ ಪ್ರಸನ್ನ ಅವರ ಮನವಿಯನ್ನ ಸ್ವೀಕರಿಸಿ ಗ್ರಾಮದ ಎಚ್ ಡಿ ದೇವೇಗೌಡ ಕ್ರೀಡಾಂಗಣ ಹಾಗೂ ಗ್ರಾಮದ ಕೆರೆ ಅಭಿವೃದ್ಧಿ ಮಾಡುವಂತೆ ಮನವಿ ಸಲ್ಲಿಸಿದ ಹಿನ್ನೆಲೆ ಸ್ಥಳದಲ್ಲೇ ನೂತನ ಸಚಿವ ಗ್ರಾಮಸ್ಥರಿಗೆ ಭರವಸೆ ನೀಡಿ ಎಚ್ ಡಿ ದೇವೇಗೌಡ ಕ್ರೀಡಾಂಗಣ ಹಾಗೂ ಕೆರೆ ಅಭಿವೃದ್ಧಿಯನ್ನ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಮಾಡುತ್ತೇನೆಂದು ಗೆಜ್ಜಲಗೆರೆ ಗ್ರಾಮಸ್ಥರಿಗೆ ಭರವಸೆ ನೀಡಿದರು.