ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯಲ್ಲಿನ ಸುಮಾರು 25 ಉಪಕೇಂದ್ರಗಳ ಆಯುಷ್ಮಾನ್ ಅರೋಗ್ಯ ಮಂದಿರಗಳಿಗೆ ಸ್ವಂತ ಜಾಗ ಕಲ್ಪಿಸಿ ಸ್ವಂತ ಕಟ್ಟಡ ಕಟ್ಟಲು ಆರೋಗ್ಯ ಇಲಾಖೆ ತಾಲೂಕು ಆಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಈ ಮೂಲಕ ಗ್ರಾಮಾಂತರ ಪ್ರದೇಶದಲ್ಲಿಯೇ ಉತ್ತಮ ಆರೋಗ್ಯ ಸೇವೆ ನೀಡಲು ಮುಂದಾಗಿದೆ.
ಕ್ಷೇತ್ರದ ವ್ಯಾಪ್ತಿಗೆ ಬರುವ ಕೆ.ಆರ್.ನಗರ ತಾಲೂಕಿನಲ್ಲಿರುವ ಸುಮಾರು 9 ಉಪಕೇಂದ್ರದ ಆಯುಷ್ಮಾನ್ ಆರೋಗ್ಯ ಮಂದಿರ ಮತ್ತು ಸಾಲಿಗ್ರಾಮ ತಾಲೂಕಿನ ಸುಮಾರು 16 ಉಪಕೇಂದ್ರದ ಆಯುಷ್ಮಾನ್ ಆರೋಗ್ಯ ಮಂದಿರ ನೂತನ ಕಟ್ಟಡ ನಿರ್ಮಾಣಕ್ಕೆ ಬೇಕಿರುವ ಸರ್ಕಾರದ ನಿವೇಶನ ಮಂಜೂರಿಗೆ ಬೇಡಿಕೆ ಇಟ್ಟಿದೆ
ಈ 25 ಉಪ ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರಗಳು ಇದೀಗ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಪ್ರತಿ ಕಟ್ಟಡಗಳಿಗೆ ಪ್ರತಿ ತಿಂಗಳು 5 ರಿಂದ 8 ಸಾವಿರ ರೂಗಳಿಗೂ ಅಧಿಕ ಬಾಡಿಗೆ ನೀಡುತ್ತಿದ್ದು ಇದರಿಂದ ಸರ್ಕಾರಕ್ಕೆ 60 ಸಾವಿರ ದಿಂದ ರಿಂದ 1 ಲಕ್ಷದ ವರೆಗೂ ಹೊರೆ ಬೀಳುತ್ತಿದೆ.
ಈ ಹೊರೆಯನ್ನು ತಪ್ಪಿಸಲು ಸರ್ಕಾರವು ಆರೋಗ್ಯ ಇಲಾಖೆಗೆ ಈ ಆರೋಗ್ಯ ಉಪಕೇಂದ್ರಗಳ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಇರುವ ಸರ್ಕಾರಿ ನಿವೇಶನಗಳನ್ನು ತಾಲೂಕು ಆಡಳಿತದಿಂದ ಪಡೆದು ಕೊಂಡರೇ ನೂತನ ಕಟ್ಟಡ ನಿರ್ಮಿಸಲು ಅನುಧಾನವನ್ನು ನೀಡಲು ಮುಂದಾಗಿದೆ.
ಈ ಹಿನ್ನಲೆಯಲ್ಲಿ ಈ ಎರಡು ತಾಲೂಕುಗಳ ಆರೋಗ್ಯಧಿಕಾರಿ ಡಾ.ನಟರಾಜ್ ಮತ್ತು
ಅವರ ತಂಡ ಸಾಲಿಗ್ರಾಮ ತಾಲೂಕು ತಹಸೀಲ್ದಾರ್ ಎಸ್.ಎನ್.ನಗರ ಮತ್ತು ಕೆ.ಆರ್.ನಗರ ತಾಲೂಕು ತಹಸೀಲ್ದಾರ್ ಸುರೇಂದ್ರ ಮೂರ್ತಿ ಅವರನ್ನು ಖುದ್ದು ಭೇಟಿ ಮಾಡಿ ಸರ್ಕಾರಿ ನಿವೇಶನಗಳ ಮಂಜೂರಿಗೆ ಪ್ರಸ್ತಾವನೆಯ ಸಲ್ಲಿಸಿದೆ.
ಆರೋಗ್ಯ ಇಲಾಖೆಯ ಮನವಿಗೆ ಸ್ಪಂದಿಸಿರುವ ಈ ಎರಡು ತಾಲೂಕುಗಳ ತಹಸೀಲ್ದಾರ್ ಅವರು ಈ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗವನ್ನು ಗುರುತಿಸಲು ಗ್ರಾ.ಪಂ.ಪಿಡಿಓ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಸರ್ಕಾರಿ ಜಾಗ ಸಿಕ್ಕಿ ಈ ಜಾಗ ಆರೋಗ್ಯ ಇಲಾಖೆಗೆ ಹಸ್ತಾಂತರ ಆದರೇ ಈ ಕೇಂದ್ರಗಳಿಗೆ ಸ್ವಂತ ಕಟ್ಟಡ ಭಾಗ್ಯ ಲಭ್ಯವಾಗಲಿದೆ.
“ಇಲ್ಲಿ ಯಾರು ಯಾರು ಕೆಲಸ ನಿರ್ವಹಿಸಲಿದ್ದಾರೆ “
ಈ ಆರೋಗ್ಯ ಉಪಕೇಂದ್ರ ಆಯಷ್ಮಾನ್ ಆರೋಗ್ಯ ಕೇಂದ್ರದ ಆರೋಗ್ಯ ಸಮುದಾಯ ಆರೋಗ್ಯಧಿಕಾರಿ ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗು ಇದರ ವ್ಯಾಪ್ತಿಯ ಆಶಾ ಕಾರ್ಯಕರ್ತರು ಕೆಲಸ ನಿರ್ಹಿಸಲಿದ್ದಾರೆ.
ಇಲ್ಲಿ ಸಿಗುವ ಆರೋಗ್ಯ ಸೇವೆಗಳು ಏನು..?
ಈ ಆರೋಗ್ಯ ಉಪಕೇಂದ್ರ ಆಯಷ್ಮಾನ್ ಆರೋಗ್ಯ ಕೇಂದ್ರದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಟಾನದ ಅಡಿಯಲ್ಲಿ ಇಲ್ಲಿ ತಾಯಿ- ಮಕ್ಕಳ ಆರೋಗ್ಯ ತಪಾಸಣೆ ಮಾಡುವುದು ಇದರ ಜತಗೆ ಇಲ್ಲಿ ಜನಸಾಮಾನ್ಯರಿಗೆ ಬಿ.ಪಿ.ಶುಗರ್ ತಪಾಸಣೆ ಅಲ್ಲದೇ ಪಾರ್ಶುವಾಯು, ಕ್ಷಯ – ಕುಷ್ಟ ರೋಗಿಗಿಗಳಿಗೆ ಇಲ್ಲಿ ಚಿಕಿತ್ಸೆ ಲಭ್ಯವಾಗಲಿದೆ.
“ಸರ್ಕಾರಿ ಜಾಗಕ್ಕೆ ಬೇಡಿಕೆ ಸಲ್ಲಿಸಿರುವ ಗ್ರಾಮಗಳು”
ಕೆ.ಅರ್.ನಗರ ತಾಲೂಕಿನಲ್ಲಿ ಮಂಚನಹಳ್ಳಿ, ಸಿ.ವಿ.ಗುಡಿ, ಲಾಲದೇವನಹಳ್ಳಿ, ಬಸವರಾಜಪುರ, ಚೀರನಹಳ್ಳಿ, ಕೆಸ್ತೂರು, ನಾರಾಯಣಪುರ, ದೆಗ್ಗನಹಳ್ಳಿ, ಹೊಸೂರು ಕಲ್ಲಹಳ್ಳಿ, ಸಾಲಿಗ್ರಾಮ ತಾಲೂಕಿನಲ್ಲಿ ಹಾಡ್ಯದಲ್ಲಿ ಎರಡು, ಕರ್ತಾಳು, ಬಳ್ಳೂರು, ಹೆಬ್ಸೂರು, ಹೊನ್ನೇನಹಳ್ಳಿ, ಮಿರ್ಲೆ, ಚುಂಚನಕಟ್ಟೆ, ಹೊಸೂರು, ಮುಂಜನಹಳ್ಳಿ, ಕುಪ್ಪಳ್ಳಿ, ಭೇರ್ಯ, ತಂದ್ರೆ, ಗುಳುವಿನ ಅತ್ತಿಗುಪ್ಪೆ, ಚಿಕ್ಕನಾಯಕನಹಳ್ಳಿ, ಮೂಡಲಬೀಡು
ಕೆ.ಆರ್.ನಗರ ತಾಲೂಕಿನಲ್ಲಿ 9 ಮತ್ತು ಸಾಲಿಗ್ರಾಮ ತಾಲೂಕಿನಲ್ಲಿ 16 ಆರೋಗ್ಯ ಉಪ ಉಪಕೇಂದ್ರದ ಆಯುಷ್ಮಾನ್ ಆರೋಗ್ಯ ಮಂದಿರಗಳಿಗೆ ಸ್ವಂತ ಕಟ್ಟ ಕಟ್ಟಡ ಕಟ್ಟಲು ಸರ್ಕಾರಿ ಜಾಗಗಳನ್ನು ಪಡೆಯಲು ಆರೋಗ್ಯ ಇಲಾಖೆ ಕಾರ್ಯಮುಖವಾಗಿದ್ದು ಜಾಗ ನಮ್ಮ ಇಲಾಖೆಗೆ ಹಸ್ತಾಂತರ ಆಗಬೇಕಿದೆ. ಈ ಕಟ್ಟಡಗಳ ನಿರ್ಮಾಣ ಆದರೆ ಗ್ರಾಮೀಣ ಜನರಿಗೆ ತಮ್ಮ ಗ್ರಾಮಗಳ ಸಮೀಪವೇ ಆರೋಗ್ಯ ಸೇವೆ ದೊರೆಯಲು ಅನುಕೂಲವಾಗಲಿದೆ ಈ ಕೇಂದ್ರಗಳು ಮಿನಿ ಆಸ್ವತ್ರೆಗಳಾಗಲಿವೆ.
ಡಾ.ನಟರಾಜು,ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಆರೋಗ್ಯಾಧಿಕಾರಿಗಳು.