ನಂಜನಗೂಡು: ನಂಜನಗೂಡು ಕ್ಷೇತ್ರಕ್ಕೆ 100 ಬಸ್ ಹೆಚ್ಚುವರಿಯಾಗಿ ನೀಡುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಿದ್ದು, ಬಸ್ ಕೊರತೆ ನಿವಾರಣೆಯಾಗಲಿದೆ ಎಂದು ಶಾಸಕ ದರ್ಶನ್ ದ್ರುವ ನಾರಾಯಣ್ ಮಾಹಿತಿ ನೀಡಿದರು.
“ರಾಜ್ಯಧರ್ಮ” ವೆಬ್ ಸೈಟ್ ನಲ್ಲಿ ಶುಕ್ರವಾರ ಪ್ರಕಟವಾದ ‘೬ ಕಿ ಮೀ ನಡೆದುಕೊಂಡೆ ಶಾಲೆ-ಕಾಲೇಜಿಗೆ ತೆರಳಿದ ವಿದ್ಯಾರ್ಥಿಗಳು’ ಸುದ್ದಿ ಕುರಿತು ಇಂದು ಪ್ರತಿಕ್ರಿಯೆ ನೀಡಿದರು.
ಪ್ರತಿದಿನ ಬಸ್ಸಿನ ಕೊರತೆ ಇದೆ ಎಂದು ನನಗೆ ಮೊಬೈಲ್ ಕಾಲ್ ಬರುತ್ತಿದೆ. ಆದ್ದರಿಂದ 4,000 ಹೆಚ್ಚಿನ ಬಸ್ ಒದಗಿಸಲಾಗುತ್ತದೆ ಎಂದು ಸಾರಿಗೆ ಸಚಿವರು ಹೇಳಿದ್ದಾರೆ. ನನ್ನ ಕ್ಷೇತ್ರಕ್ಕೆ 100 ಬಸ್ಸುಗಳನ್ನು ಹೆಚ್ಚು ನೀಡಬೇಕು ಎಂದು ಕೇಳಿದ್ದೇನೆ.ಇದರಿಂದ ಬಸ್ಸಿನ ಕೊರತೆ ನಿವಾರಣೆ ಆಗುತ್ತದೆ ಎಂದರು.
ಶುಕ್ರವಾರ ತಾಲೂಕಿನ ದೇಬೂರು, ಬ್ಯಾಳಾರು ಗ್ರಾಮದ ಪ್ರೌಢಶಾಲೆ, ಪಿಯುಸಿ, ಹಾಗೂ ಪದವಿ ವಿದ್ಯಾರ್ಥಿಗಳು ಬೆಳಿಗ್ಗೆ 7 ಗಂಟೆ ಯಿಂದ 9 ಗಂಟೆವರೆಗೆ ಕಾದರೂ ಸಹ ಬಂದ ಬಸ್ಸುಗಳು ಫುಲ್ ರಶ್ ಇದ್ದ ಕಾರಣ ನಿಲ್ಲಿಸದೆ ಹೋದರು. ಎರಡು ಗಂಟೆಗಿಂತಲೂ ಹೆಚ್ಚು ಕಾಲ ಕಾದು ನಿಂತರು ಸಹ ಬಸ್ಸುಗಳು ವಿದ್ಯಾರ್ಥಿಗಳನ್ನು ಕಂಡೊಡನೆ ನಿಲ್ಲಿಸದೆ ಹೋಗುತ್ತಿದ್ದರಿಂದ ಬೇಸತ್ತ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನಡೆದುಕೊಂಡೆ ಶಾಲಾ ಕಾಲೇಜುಗಳತ್ತ ಮುಖ ಮಾಡಿದ್ದರು.